ಸಾಂದರ್ಭಿಕ ಚಿತ್ರ 
ರಾಜ್ಯ

ಕೋವಿಡ್ ಗೆ ಪೋಷಕರು ಬಲಿ: ರಾಜ್ಯದ 10 ಜಿಲ್ಲೆಗಳಲ್ಲಿ 18 ಮಕ್ಕಳು ಅನಾಥ

ರಾಜ್ಯದ 10 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ 18 ಮಕ್ಕಳು ಅನಾಥರಾಗಿದ್ದಾರೆ, ಸರ್ಕಾರಿ ಮಾಹಿತಿಗಳ ಪ್ರಕಾರ ಮೇ 31ರವರೆಗೆ ರಾಜ್ಯದಲ್ಲಿ 18 ಮಕ್ಕಳು ಅನಾಥರಾಗಿದ್ದಾರೆ.

ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ 18 ಮಕ್ಕಳು ಅನಾಥರಾಗಿದ್ದಾರೆ, ಸರ್ಕಾರಿ ಮಾಹಿತಿಗಳ ಪ್ರಕಾರ ಮೇ 31ರವರೆಗೆ ರಾಜ್ಯದಲ್ಲಿ 18 ಮಕ್ಕಳು ಅನಾಥರಾಗಿದ್ದಾರೆ.

ಮುಂದಿನ ಕೆಲ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ, ಬಾಗಲಕೋಟೆಯಲ್ಲಿ 3, ರಾಯಚೂರು 3, ಬೆಂಗಳೂರು ನಗರ 2, ಮೈಸೂರು 2, ಬೀದರ್ 2, ಬೆಳಗಾವಿ 2, ಕೋಲಾರ 1, ಚಾಮರಾಜನಗರ 1, ದಾವಣೆಗೆರೆ 1, ಮಂಡ್ಯ ದಲ್ಲಿ ಒಂದು ಮಗು ಸೇರಿ ಒಟ್ಟು 18 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ.

ಈ ಎಲ್ಲ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗಳಿಗೆ ಹಸ್ತಾಂತರಿಸಲಾಗಿದೆ. ಕೋವಿಡ್ ಅನಾಥರ ಮಾಹಿತಿ ಪ್ರಗತಿಯಲ್ಲಿದೆ. ಕಳೆದ 10 ದಿನಗಳಿಂದ ಅಂಗನವಾಡಿ ಕಾರ್ಮಿಕರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು, ಅಧಿಕಾರಿಗಳಿಂದ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಈ ಮಾಹಿತಿ ಸಂಗ್ರಹಿಸಿದೆ.

2020 ರ ಮಾರ್ಚ್ 1 ರಿಂದ ಮೇ 31 ರವರೆಗೆ ಕೋವಿಡ್ ನಿಂದ ಅನಾಥರಾದ ಅಥವಾ ಒಂದೇ ಪೋಷಕರೊಂದಿಗೆ ಉಳಿದಿರುವ ಮಕ್ಕಳ ವಿವರಗಳನ್ನು ಒದಗಿಸಲು ನಿರ್ದೇಶನಾಲಯವು ಎಲ್ಲಾ ಜಿಲ್ಲೆಗಳ ಸಿಪಿಯುಗಳಿಗೆ ಸೂಚಿಸಿದೆ. 

ಜೂನ್ 1ರೊಳಗೆ ಮಾಹಿತಿ ಸಲ್ಲಿಸಲು ನಿರ್ದೇಶನಾಲಯ ಸೂಚಿಸಿದೆ, ಆದರೆ ಕೆಲವು ಅಧಿಕಾರಿಗಳು ಕೊರೋನಾ ಸೋಂಕಿಗೊಳಪಟ್ಟು ರಜೆಯಲ್ಲಿದ್ದಾರೆ, ಹೀಗಾಗಿ ಸ್ವಲ್ಪ ವಿಳಂಬವಾಗಬಹುದು.

ನಾವು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಕ್ಕಳ ಮೇಲೆ ನಿಗಾ ಇಡುವಂತೆ ಸೂಚಿಸಿದ್ದೇವೆ, ಕೋವಿಡ್  ಪರಿಣಾಮ ಬೀರದಂತೆ ಅವರ ರಕ್ಷಣೆ ಮಾಡುವಂತೆ ತಿಳಿಸಿರುವುದಾಗಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ತಿಳಿಸಿದ್ದಾರೆ. 

ಮಾರ್ಚ್ 2020 ರಿಂದ ಅನಾಥವಾಗಿರುವ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಅದನ್ನು ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗದ (ಎನ್‌ಸಿಪಿಸಿಆರ್) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಕ್ಕಳಿಗೆ ಮೂಲಭೂತ ಅಗತ್ಯಗಳಾದ ಆಹಾರ, ಆಶ್ರಯ ಮತ್ತು ಬಟ್ಟೆಗಳನ್ನು ನೋಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಕರ್ನಾಟಕ ಸರ್ಕಾರ ನವೀಕರಿಸಿದ ಅಂಕಿಅಂಶಗಳನ್ನು ಎನ್‌ಸಿಪಿಸಿಆರ್ ಪೋರ್ಟಲ್ ಬಾಲ್ ಸ್ವರಾಜ್ ನಲ್ಲಿ ಅಪ್‌ಲೋಡ್ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ನಿಂದ ಅನಾಥರಾದವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ, ಕೊರೋನಾ ಎರಡನೇ ಅಲೆಯಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. 21 ರಿಂದ 55 ವರ್ಷದವರು ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನ ವಾಸುದೇವ ಶರ್ಮಾ ಹೇಳಿದ್ದಾರೆ. ಕೋವಿಡ್ ನಿಂದ ಒಬ್ಬ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳನ್ನು ಪರಿಹಾರ ಕ್ರಮಗಳಿಗೆ
ಪರಿಗಣಿಸಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಕೇವಲ ಇಬ್ಬರು ಅನಾಥ ಪ್ರಕರಣ ಇದೆ ಎಂದು ಒಪ್ಪಿಕೊಳ್ಳುವುದು ಕಷ್ಟ, ರಾಜ್ಯದಲ್ಲಿ ಶೇ.50 ರಷ್ಟು ಪ್ರಕರಣಗಳು ಮತ್ತು ಸಾವುನೋವುಗಳು ದಾಖಲಾಗಿವೆ ಎಂದು ಹೆಸರಿಸಲು ಇಚ್ಚಿಸದ ಮತ್ತೊಬ್ಬ ಕಾರ್ಯಕರ್ತ ಹೇಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ವಾರಾಂತ್ಯದಲ್ಲಿ ಕೋವಿಡ್ ನಿಂದ ಅನಾಥರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT