ರಾಜ್ಯ

ಮಂಗಳೂರು: ದುರ್ಗಾ ವಾಹಿನಿ, ವಿಎಚ್‌ಪಿ ಮುಖಂಡರ ಕುರಿತು ಅವಹೇಳನಕಾರಿ ಸಂದೇಶ; ನಾಲ್ವರ ಸೆರೆ

Raghavendra Adiga

ಮಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ದುರ್ಗಾ ವಾಹಿನಿ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ಶರಣ್ ಪಂಪ್‌ವೆಲ್ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದ ಹಿನ್ನೆಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ದುರ್ಗಾ ವಾಹಿನಿ ವಿಎಚ್‌ಪಿಯ ಮಹಿಳಾ ವಿಭಾಗವಾಗಿದೆ.

ಜೂನ್ 1 ರ ಮಂಗಳವಾರ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ

ಸುಳ್ಯ ಮೂಲದ ಭವಾನಿ ಶಂಕರ್ (32), ಬಜಲ್ ಮೂಲದ ನೌಶಾದ್ (27), ಕಾವೂರು ಮೂಲದ ರವಿ ಅಲಿಯಾಸ್ ಟಿಕ್ಕಿ ರವಿ, ಮತ್ತು ಮೂಡಬಿದಿರೆಯ ಜಯ ಕುಮಾರ್ (33) ಬಂಧಿತರು.

ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರಿರಾಮ್‌ಶಂಕರ್, ಎಸಿಪಿ ಮಂಗಳೂರು ಕೇಂದ್ರ, ಮಂಗಳೂರು ಪೂರ್ವ ಪೊಲೀಸ್ ಠಾಣೆ ನಿರೀಕ್ಷಕರು ಮತ್ತು ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ  ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ನಡೆದಿದೆ.

ವೈದ್ಯರ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ  ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಮಂಗಳೂರು ನಗರ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಾರ್ನಮಿಕಟ್ಟೆಯ ಶಂಶೀರ್ ಆಲಿ (43), ಚೊಕ್ಕಬೆಟ್ಟುವಿನ ಸರ್ಫರಾಜ್ (43) ಎನ್ನುವವರನ್ನು ಬಂಧಿಸಲಾಗಿದೆ.

ಫಳ್ನೀರ್​ನಲ್ಲಿರುವ ಅಥೆನಾ ಆಸ್ಪತ್ರೆಯ ವೈದ್ಯ ಡಾ. ಜಯಪ್ರಕಾಶ್ ಮೇಲೆ ಕೊರೊನಾ ರೋಗಿಯ ಚಿಕಿತ್ಸೆಗೆ ಸಂಬಂಧಿಸಿ ಕುಟುಂಬಸ್ಥರಿಂದ ಹಲ್ಲೆಯಾಗಿತ್ತು. ಈ ಸಂಬಂಧ ಕೊರೊನಾ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು.

SCROLL FOR NEXT