ರಾಜ್ಯ

ರಾಯಚೂರು: ದೇವದಾಸಿ ಮಾಡುವುದಾಗಿ ಪೋಷಕರ ಬೆದರಿಕೆಗೆ ಅಂಜಿ ಮನೆ ಬಿಟ್ಟು ಹೋದ ಯುವತಿ!

Raghavendra Adiga

ಕಲಬುರಗಿ: ರಾಜ್ಯ ಸರ್ಕಾರವು ದೇವದಾಸಿ ಪದ್ದತಿಯನ್ನು ನಿಷೇಧಿಸಿದೆ, ನಿರ್ಮೂಲನ ಮಾಡಲಾಗಿದೆ ಎಂದು ಹೇಳಿಕೊಂಡರೂ, ಅದು ಈಗಲೂ ಅಲ್ಲಲ್ಲಿ ನಡೆಯುತ್ತಲೇ ಇದೆ. ತನ್ನ ಸಹೋದರಿಯ ಗಂಡನನ್ನು ಮದುವೆಯಾಗಲು ನಿರಾಕರಿಸಿದರೆ ‘ದೇವದಾಸಿ’ಯನ್ನಾಗಿ ಮಾಡಿ ದೇವಾಲಯಕ್ಕೆ ಬಿಡುವುದಾಗಿ ಪೋಷಕರು ಬೆದರಿಕೆ ಹಾಕಿದ್ದರಿಂದ 20 ವರ್ಷದ ಯುವತಿ ಮನೆ ಬಿಟ್ಟು ಓಡಿಹೋಗಿದ್ದಾಳೆ.

ಯಲ್ಲಮ್ಮ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ ಕೆಲವು ದಿನಗಳ ಹಿಂದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮದಲ್ಲಿರುವ ತನ್ನ ಮನೆಯಿಂದ ತಪ್ಪಿಸಿಕೊಂಡು ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಳು.

ಪೋಷಕರು ಆಕೆ ಇರುವ ಸ್ಥಳವನ್ನು ತಿಳಿದಾಗ, ಅವರು ಸಂಬಂಧಿಕರಿಗೂ ಬೆದರಿಕೆ ಹಾಕಿದ್ದಾರೆ ಎಂದು ಸುರಪುರ ತಾಲೂಕು  ಮಕ್ಕಳ ಅಭಿವೃದ್ಧಿ ಅಧಿಕಾರಿ ಲಾಲ್ ಸಾಬ್ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿ ವಕೀಲರ ಎಚ್ಚರಿಕೆ ನೀಡಿ ಯುವತಿಯನ್ನು ರಕ್ಷಿಸಿ ದೇವದುರ್ಗದಲ್ಲಿ ಆದಿಜಾಂಬವ ಎಜುಕೇಶನ್ ಸೊಸೈಟಿ ನಡೆಸುತ್ತಿರುವ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ನಂತರ, ಯಲ್ಲಮ್ಮ ಜಾಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಇತ್ತ ಯುವತಿಯ ವಿರುದ್ಧ ಪೋಷಕರು ಪ್ರತಿ-ದೂರು ದಾಖಲಿಸಿದ್ದು, ಆಕೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದಾಳೆ ಮತ್ತು ಮನೆಯಿಂದ ಹಣವನ್ನು ಪಡೆಯಲು ಯೋಜಿಸುತ್ತಿರುವುದಾಗಿ ಆರೋಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಯುವತಿಯನ್ನು ತಮಗೆ ಹಸ್ತಾಂತರಿಸುವಂತೆ ಅವರು ಪೊಲೀಸರಿಗೆ ಮನವಿ ಮಾಡಿದರು. ಯುವತಿ  ತನ್ನ ಮನೆಗೆ ಮರಳಲು ನಿರಾಕರಿಸಿದ್ದರಿಂದ ಮತ್ತು ರಕ್ಷಣೆ ಕೋರಿರುವುದರಿಂದ, ಅವಳನ್ನು ರಾಯಚೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳ ತನಿಖೆಗೆ ಆದೇಶಿಸುವುದಾಗಿ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್‌ಕುಮಾರ್ ತಿಳಿಸಿದ್ದಾರೆ.

"ಯುವತಿ ಕೌನ್ಸೆಲಿಂಗ್ ಗೆ ಒಳಗಾಗುತ್ತಾಳೆ, ಅಗತ್ಯವಿದ್ದರೆ, ಸ್ವ ಉದ್ಯೋಗಕ್ಕಾಗಿ ಅವಳಿಗೆ ಹಣಕಾಸಿನ ನೆರವು ನೀಡಲಾಗುವುದು. ಅವಳು ಬಯಸಿದರೆ, ಅವಳ ಮದುವೆಯು ಅವಳ ಆಯ್ಕೆಯ ವ್ಯಕ್ತಿಯೊಂದಿಗೆ ನಡೆಸಲಾಗುವುದು” ಎಂದು ಅವರು ಹೇಳಿದರು.

SCROLL FOR NEXT