ಬೆಂಗಳೂರು ನೀರು ಸರಬರಾಜು ಮಂಡಳಿ 
ರಾಜ್ಯ

ಅಲರ್ಟ್: ಬುಧವಾರ ಬೆಂಗಳೂರಿನಾದ್ಯಂತ ನೀರು ಪೂರೈಕೆಯಲ್ಲಿ ವ್ಯತ್ಯಯ

ರಾಜಧಾನಿ ಬೆಂಗಳೂರಿನಲ್ಲಿ ಇದೇ ಬುಧವಾರ ನೀರಿನ ಸೇವೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಕಂಡುಬರಲಿದ್ದು, ಬೆಂಗಳೂರು ನೀರು ಸರಬರಾಜು ಸಂಸ್ಥೆ ನಡೆಸುತ್ತಿರುವ ಕಾಮಗಾರಿ ಇದಕ್ಕೆ ಕಾರಣ ಎಂದು ಹೇಳಲಾಗಿಗದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇದೇ ಬುಧವಾರ ನೀರಿನ ಸೇವೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಕಂಡುಬರಲಿದ್ದು, ಬೆಂಗಳೂರು ನೀರು ಸರಬರಾಜು ಸಂಸ್ಥೆ ನಡೆಸುತ್ತಿರುವ ಕಾಮಗಾರಿ ಇದಕ್ಕೆ ಕಾರಣ ಎಂದು ಹೇಳಲಾಗಿಗದೆ.

ಪಶ್ಚಿಮ, ದಕ್ಷಿಣ ಮತ್ತು ಉತ್ತರ ಬೆಂಗಳೂರು ಪ್ರದೇಶಗಳಲ್ಲಿ ಬುಧವಾರ (ಜೂನ್ 16) ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ 18 ಗಂಟೆಗಳ ನೀರಿನ ಅಡೆತಡೆ ಉಂಟಾಗಲಿದೆ. ಕಾವೇರಿ 1,2 ಮತ್ತು 3ನೇ ಹಂತದ ಕಾಮಗಾರಿ ಹಾಗೂ ಲ್ಯಾಂಗ್‌ಫೋರ್ಡ್‌ ಮೆಟ್ರೊ ನಿಲ್ದಾಣದ ಬಳಿ ಹೊಸ ಕೊಳವೆ ಮಾರ್ಗದ ಜೋಡಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಬುಧವಾರ ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ನಗರದ ವಿವಿಧೆಡೆ ನೀರು ಪೂರೈಕೆ ಇರುವುದಿಲ್ಲ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.

ಪರಿಣಾಮ ಬೆಂಗಳೂರಿನ ಕೆ.ಪಿ.ಅಗ್ರಹಾರ, ನ್ಯೂ ಬಿನ್ನಿ ಬಡಾವಣೆ, ಚಾಮರಾಜಪೇಟೆ, ಪಾದರಾಯನಪುರ, ವಿದ್ಯಾಪೀಠ, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಮೌಂಟ್‍ಜಾಯ್ ಎಕ್ಸ್‌ಟೆನ್ಷನ್, ಅಶೋಕನಗರ, ಶ್ರೀನಗರ, ಕುಮಾರಸ್ವಾಮಿ ಬಡಾವಣೆ, ಇಸ್ರೊ ಬಡಾವಣೆ, ಆಸ್ಟಿನ್‌ ಟೌನ್, ಈಜಿಪುರ, ರಿಚ್ಮಂಡ್‌ ಟೌನ್, ಎಂ.ಜಿ.ರಸ್ತೆ, ದೊಮ್ಮಲೂರು, ಎಚ್.ಎ.ಎಲ್, ಕೋಡಿಹಳ್ಳಿ, ಹನುಮಂತಪ್ಪ ಬಡಾವಣೆ, ಹಲಸೂರು, ಆಡುಗೋಡಿ, ಜಯನಗರ, ತಿಲಕನಗರ, ಬೋವಿ ಕಾಲೊನಿ, ಕೋರಮಂಗಲ, ಮಡಿವಾಳ, ಟೆಲಿಕಾಂ ಬಡಾವಣೆ, ಬ್ಯಾಟರಾಯನಪುರ, ವಿವಿ ಪುರ, ಜೆ.ಜೆ.ಆರ್. ನಗರ, ಜನತಾ ಕಾಲೊನಿ, ಯಡಿಯೂರು, ಟೀಚರ್ಸ್ ಕಾಲೊನಿ, ಬನಗಿರಿ ನಗರ, ಇಟ್ಟಮಡು, ಹೊಸಕೆರೆಹಳ್ಳಿ, ಬನಶಂಕರಿ, ಕದಿರೇನಹಳ್ಳಿ, ಪದ್ಮನಾಭನಗರ, ಉತ್ತರಹಳ್ಳಿ, ಎಜಿಎಸ್ ಬಡಾವಣೆ, ಆರೆಹಳ್ಳಿ, ಶಾಂತಿನಗರ, ಬೈರಸಂದ್ರದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯವಾಗಲಿದೆ. 

ಅಲ್ಲದೆ ಎಲ್‍ಐಸಿ ಕಾಲೊನಿ, ಆರ್‌ಬಿಐ ಕಾಲೊನಿ, ಹೊಂಬೇಗೌಡ ನಗರ, ಸಿದ್ದಾಪುರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಜೆ.ಪಿ.ನಗರ, ಕುಮಾರ ಪಾರ್ಕ್, ಹೈಗ್ರೌಂಡ್ಸ್, ಸಂಪಂಗಿರಾಮನಗರ, ಪುರಭವನ, ಲಾಲ್‍ಬಾಗ್, ಗುರುರಾಜ ಬಡಾವಣೆ, ಎಸ್‍ಜೆಪಿ ರಸ್ತೆ, ಕೆಆರ್ ಮಾರ್ಕೆಟ್, ಶಿವಾಜಿನಗರ, ಕಾಕ್ಸ್‌ಟೌನ್, ಜೀವನಹಳ್ಳಿ. ಬೈಯ್ಯಪ್ಪನಹಳ್ಳಿ, ಪಿಳ್ಳಣ್ಣ ಗಾರ್ಡನ್, ಪಿ ಆ್ಯಂಡ್ ಕಾಲೊನಿ, ಡಿಜೆ ಹಳ್ಳಿ, ಯಶವಂತಪುರ, ಮಲ್ಲೇಶ್ವರ, ಜಯಮಹಲ್, ಜೆ.ಸಿ ನಗರ, ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಕಾವಲ್ ಬೈರಸಂದ್ರ, ಗಂಗಾ ನಗರ, ಆರ್‌.ಟಿ. ನಗರ. ಜೀವನ್ ಬಿಮಾ ನಗರ, ಮರ್ಫಿ ಟೌನ್, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್, ಗೌತಮ್ ಪುರ, ಇಂದಿರಾನಗರ, ಗಾಂಧಿನಗರ, ಮಾರುತಿಸೇವಾ ನಗರ, ಹಚ್ಚಿನ್ಸ್ ರಸ್ತೆ, ನಾಗವಾರ, ದೀನಬಂಧು ನಗರ, ದೇವಗಿರಿ, ಲಿಂಗರಾಜಪುರ, ಫ್ರೇಜರ್ ಟೌನ್. ಜಾನಕಿರಾಮ ಬಡಾವಣೆ, ಶೇಷದ್ರಿಪುರ, ಕಾಟನ್ ಪೇಟೆ, ಹೊಸ ಗುಡ್ಡದಹಳ್ಳಿ, ಸಿದ್ದರಾಮಪ್ಪ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT