ಸಂಗ್ರಹ ಚಿತ್ರ 
ರಾಜ್ಯ

ಜೂನ್ 21 ರಿಂದ ಮಾಲ್, ರೆಸ್ಟೋರೆಂಟ್ ತೆರೆಯಬಹುದು: ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ

ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಲ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬಹುದು. ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು, ಶಾಪಿಂಗ್ ಕಾಂಪ್ಲೆಕ್ಸ್'ನ್ನು ಜೂನ್ 21 ರಿಂದ ಪುನರಾರಂಭಿಸಬಹುದು.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಲ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬಹುದು. ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು, ಶಾಪಿಂಗ್ ಕಾಂಪ್ಲೆಕ್ಸ್'ನ್ನು ಜೂನ್ 21 ರಿಂದ ಪುನರಾರಂಭಿಸಬಹುದು. ನಿಯಂತ್ರಿತ ಸಂಖ್ಯೆಯ ಜನರು ಸೇರುವಂತೆ ನೋಡಿಕೊಳ್ಳಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. 

ಈ ಕುರಿತಂತೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದು, ಸಭೆಯಲ್ಲಿ ಅನ್'ಲಾಕ್ 2 ಹಂತದಲ್ಲಿ ರೆಸ್ಟೋರೆಂಟ್, ಮಾಲ್, ಕಟಿಂಗ್ ಶಾಪ್, ಸಲೂನ್, ಸ್ಪಾ, ಮದುವೆ ಮಂಟಪಗಳನ್ನು ತೆರೆಯಬಹುದು. ಆದರೆ, ಶೇ.50ರಷ್ಟು ಜನರು ಸೇರುವಂತೆ ಸೂಚಿಸಬೇಕು. ಅಲ್ಲದೆ, ಅನ್ಲಾಕ್ 2.0 ಮತ್ತು 3.0 ರ ನಡುವೆ ಎರಡು ವಾರಗಳ ಅಂತರ ಇರುವಂತೆಯೂ ಸೂಚಿಸಿದೆ. ಈ ಪ್ರದೇಶಗಳಲ್ಲಿ ಹೆಚ್ಚೆಚ್ಚು ಜನರು ಸೇರುವುದರಿಂದ ಸೋಂಕು ಹೆಚ್ಚಾಗಿ ಹರಡಲಿದ್ದು, ಎರಡರ ನಡುವೆ 2 ವಾರಗಳ ಅಂತರ ಇರಬೇಕೆಂದು ಸರ್ಕಾರಕ್ಕೆ ತಿಳಿಸಿದೆ. ಅನ್ಲಾಕ್ 3.0 ಗೂ ಮೊದಲೂ ಆಕ್ಸಿಜನ್ ಹಾಸಿಗೆಗಳು ಶೇ.60ಕ್ಕಿಂತಲೂ ಕಡಿಮೆ ಇರುವ ಜಿಲ್ಲೆಗಳನ್ನು ಪರಿಶೀಲನೆ ನಡೆಸಬೇಕೆಂದು ತಿಳಿಸಿದೆ. 

ಜೂನ್ ಅಂತ್ಯದವರೆಗೂ ನೈಟ್ ಕರ್ಫ್ಯೂ ಮುಂದುವರೆಸಬೇಕು. ಸಾರ್ವಜನಿಕ ರ್ಯಾಲಿ, ಧರಣಿ, ಜಾತ್ರೆ ಹಾಗೂ ಹಬ್ಬಗಳ ಮೇಲೆ ನಿರ್ಬಂಧ ಹೇರಬೇಕು. ಜೂನ್ 21ರಿಂದ 2ನೇ ಹಂತದ ಅನ್'ಲಾಕ್ ಆರಂಭವಾಗಲಿದ್ದು, ಜೂನ್ 5 ರಿಂದ ಮೂರನೇ ಹಂತದ ಅನ್'ಲಾಕ್ ಆರಂಭವಾಗಲಿದೆ. ಪರಿಸ್ಥಿತಿಗೆ ಅನುಸರಿಸಿ ಜನರ ಓಡಾಟಕ್ಕೆ ಅವಕಾಶ ನೀಡಬೇಕು. ಅನ್'ಲಾಕ್ 3ನೇ ಹಂತದಲ್ಲಿ ಜಿಮ್, ಯೋಗಾ ಕೇಂದ್ರ, ಧಾರ್ಮಿಕ ಕೇಂದ್ರಗಳು, ಚಿತ್ರಮಂದಿರಗಳು, ಸ್ಫೋರ್ಟ್ಸ್ ಕ್ಲಬ್, ಕ್ಲಬ್ ಹೌಸ್, ಸಾರ್ವಜನಿಕ ಶೌಚಾಲಯ ಆರಂಭಿಸಬೇಕು. ನೈಟ್ ಕರ್ಫ್ಯೂ, ಶಾಲಾ ಕಾಲೇಜುಗಳು ಪುನರಾರಂಭ ಕುರಿತು ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದೆ. 

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿಎನ್.ಮಂಜುನಾಥ್ ಅವರು ಮಾತನಾಡಿ, ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸದೇ ಹೋದಲ್ಲಿ ಮತ್ತೆ ಹಿಂದಿನ ಪರಿಸ್ಥಿತಿ ಮರುಕಳಿಸಲಿದೆ. ಮಾಲ್, ಶಾಪಿಂಗ್ ಮಾಲ್ ಹಾಗೂ ಮಾರುಕಟ್ಟೆಗಳನ್ನು ತೆರೆಯುವ ಕುರಿತು ಮರುಚಿಂತನೆ ನಡೆಸಬೇಕು. ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಇಳಿಕೆಯಾಗುತ್ತಿರುವುದು ಕಂಡು ಬರುತ್ತಿದ್ದರೆ ಮಾತ್ರ ಇವುಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT