ರಾಜ್ಯ

ಮಕ್ಕಳಿಗೆ ನೀಡುವ ಭಾರತದ ಮೊದಲ ಕೋವಿಡ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿ: ಡಿಜಿಸಿಐಯಿಂದ ಅನುಮತಿ ನಿರೀಕ್ಷೆ 

Sumana Upadhyaya

ಬೆಳಗಾವಿ: ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ನಂತರ 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಔಷಧೀಯ ಸಂಸ್ಥೆ ಝೈಡಸ್ ಕ್ಯಾಡಿಲಾ ಝೈಕೊವ್-ಡಿಯ ತುರ್ತು ಬಳಕೆಗೆ ಅನುಮತಿ ಕೋರಿ  ಭಾರತೀಯ ಡ್ರಗ್ ಕಂಟ್ರೋಲರ್ ಗೆ ಕಳುಹಿಸಿದೆ. ಮುಂದಿನ 8-10 ದಿನಗಳಲ್ಲಿ ಝೈಕೊವ್-ಡಿ ಬಳಕೆಗೆ ಡಿಸಿಜಿಐಯಿಂದ ಅನುಮತಿ ಸಿಕ್ಕಿದ ಕೂಡಲೇ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ.

ಈ ಲಸಿಕೆಯ ನಿಜವಾದ ಪ್ರಯೋಗ ಮುಂದಿನ ವರ್ಷ ಫೆಬ್ರವರಿಯಲ್ಲಿ ಮುಗಿಯಲಿದ್ದು ಮಾರ್ಗಸೂಚಿ ಪ್ರಕಾರ ಭಾರತೀಯ ಡ್ರಗ್ ಕಂಟ್ರೋಲರ್ ತುರ್ತು ಬಳಕೆಗೆ ಅನುಮತಿ ನೀಡಿದ ತಕ್ಷಣ ಮಕ್ಕಳ ಮೇಲೆ ಲಸಿಕೆ ಆರಂಭಿಸಬಹುದು. ಝೈಕೊವ್-ಡಿ ಲಸಿಕೆಯ ಪ್ರಾಯೋಗಿಕ ಪ್ರಯೋಗ ಕಳೆದ ಫೆಬ್ರವರಿಯಲ್ಲಿ ಆರಂಭವಾಗಿತ್ತು.

ದೇಶದ 20 ಕೇಂದ್ರಗಳಲ್ಲಿ ಪ್ರಯೋಗ ನಡೆಸಿದ್ದರಲ್ಲಿ ಬೆಳಗಾವಿಯ ಜೀವನ್ ರೇಖ ಆಸ್ಪತ್ರೆ ಕೂಡ ಒಂದು. ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಡಾ ಅಮಿತ್ ಭಾಟೆ, ಝೈಕೊವ್-ಡಿ ಮೂರು ಡೋಸ್ ನ ಲಸಿಕೆಯಾಗಿದ್ದು, ಮಕ್ಕಳು ಮತ್ತು ವಯಸ್ಕರು ಮೊದಲ ಡೋಸ್ ಪಡೆದ 28 ದಿನಗಳಲ್ಲಿ ಎರಡನೇ ಡೋಸ್ ನ್ನು ಮತ್ತು 56ನೇ ದಿನ ಮೂರನೇ ಡೋಸ್ ನ್ನು ಪಡೆಯಬೇಕಾಗುತ್ತದೆ.

ಜೀವನ್ ರೇಖ ಆಸ್ಪತ್ರೆ ಸೇರಿದಂತೆ ದೇಶದ 20 ಕೇಂದ್ರಗಳಲ್ಲಿ 12ರಿಂದ 18 ವರ್ಷದೊಳಗಿನ 20 ಮಕ್ಕಳ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಕಳೆದ ಫೆಬ್ರವರಿಯಲ್ಲಿ ಆರಂಭವಾದ ಪ್ರಯೋಗದ ನಂತರ 20 ಮಕ್ಕಳ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆದಿದ್ದು ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದ್ದು ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ. ಇದರಿಂದಾಗಿಯೇ ಝೈಡಸ್ ಕ್ಯಾಡಿಲಾ ತುರ್ತು ಬಳಕೆಗೆ ಅನುಮತಿ ಕೋರಿದೆ ಎಂದು ಡಾ ಅಮಿತ್ ಭಾಟೆ ಹೇಳಿದರು.

ಕಳೆದ ವರ್ಷ, ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಎಂಬ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಮೂರು ಹಂತಗಳಲ್ಲಿ ಜೀವನ್ ರೇಖೆಯಲ್ಲಿ ಡಾ. ಭಾಟೆ ಅವರ ಅಡಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಕ್ಲಿನಿಕಲ್ ಪ್ರಯೋಗಗಳ ಮೊದಲ ಎರಡು ಹಂತಗಳಲ್ಲಿ ಒಟ್ಟು 54 ಸ್ವಯಂಸೇವಕರು ಮತ್ತು ಮೂರನೇ ಮತ್ತು ಕೊನೆಯ ಹಂತದಲ್ಲಿ 2,000 ಸ್ವಯಂಸೇವಕರು ಭಾಗವಹಿಸಿದ್ದರು.

SCROLL FOR NEXT