ಸಂಗ್ರಹ ಚಿತ್ರ 
ರಾಜ್ಯ

ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ: ಅತ್ತಿಗೆ, ಸೋದರಳಿಯನ ಬಂಧನ

ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಕದಿರೇಶ್ ಅವರ ಇಬ್ಬರು ಸಂಬಂಧಿಕರನ್ನು ಪಶ್ಚಿಮ ವಿಭಾಗದ ಪೊಲೀಸರು ಭಾನುವಾರ  ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ರೇಖಾ ಅವರ ಅತ್ತಿಗೆ ಮಾಲಾ ಮತ್ತು ಅವರ ಪುತ್ರ ಅರುಣ್ ಅವರನ್ನು ತನಿಖಾಧಿಕಾರಿಗಳು ಪ್ರಶ್ನಿಸಿದ ನಂತರ ಬಂಧಿಸಲಾಯಿತು.

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಕದಿರೇಶ್ ಅವರ ಇಬ್ಬರು ಸಂಬಂಧಿಕರನ್ನು ಪಶ್ಚಿಮ ವಿಭಾಗದ ಪೊಲೀಸರು ಭಾನುವಾರ  ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ರೇಖಾ ಅವರ ಅತ್ತಿಗೆ ಮಾಲಾ ಮತ್ತು ಅವರ ಪುತ್ರ ಅರುಣ್ ಅವರನ್ನು ತನಿಖಾಧಿಕಾರಿಗಳು ಪ್ರಶ್ನಿಸಿದ ನಂತರ ಬಂಧಿಸಲಾಯಿತು.

ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಇತರ ಐದು ಶಂಕಿತರನ್ನು ಬಂಧಿಸಿದ್ದಾರೆ - ಪೀಟರ್, ಸೂರ್ಯ, ಸ್ಟೀಫನ್, ಅಜಯ್ ಮತ್ತು ಪುರುಷೋತ್ತಮ್. "ಮಾಲಾ ರೇಖಾ ಅವರ ಪತಿ ಕದಿರೇಶ್ ಅವರ ಅಕ್ಕ. ಬಂಧಿತ ವ್ಯಕ್ತಿಗಳು ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ ಮಾಲಾ ಮತ್ತು ಅವರ  ಮಗನನ್ನು ಪ್ರಶ್ನಿಸಲಾಯಿತು. ಕೊಲೆಗಾರರು ತಾಯಿ ಮತ್ತು ಮಗನೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ ಆದ್ದರಿಂದ ಅವರನ್ನು ಬಂಧಿಸಲಾಗಿದೆ"ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.

ಪೀಟರ್ ರೇಖಾ ವಿರುದ್ಧ ದ್ವೇಷ ಸಾಧಿಸುತ್ತಿದ್ದನೆಂದು ತಿಳಿದುಬಂದಿದೆ. “ಪೀಟರ್ ಕದಿರೇಶ್‌ಗೆ ಹತ್ತಿರವಾಗಿದ್ದನು ಮತ್ತು ಕದಿರೇಶ್ ಕೊಲೆಯಾದ ನಂತರ ರೇಖಾ ಪೀಟರ್ ಗೆ  ಯಾವುದೇ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಹಲವಾರು ಸಂದರ್ಭಗಳಲ್ಲಿ ಅವನನ್ನು ಅವಮಾನಿಸಿದ್ದರು. ಅದರಿಂದ ಪೀಟರ್ ರೇಖಾಳನ್ನು ದ್ವೇಷಿಸಲು ಪ್ರಾರಂಭಿಸಿದ್ದನು. ಆ ವೇಳೆ ಇತರ ಆರೋಪಿಗಳು ಅವನನ್ನು ಸಂಪರ್ಕಿಸಿ , ಅವರು ರೇಖಾ ಅವನೊಂದಿಗೆ ಹೇಗೆ ವರ್ತಿಸುತ್ತಿದ್ದಾರೆ ಎನ್ನುವುದು  ಮತ್ತು ಆಕೆ ಬೆಳೆಯುತ್ತಿರುವ ರೀತಿ ಬಗ್ಗೆ ಅಸನಾಧಾನ ಹೊರಹಾಕಿದ್ದಾರೆ.. ವೈಯಕ್ತಿಕ ಪೈಪೋಟಿ ಮತ್ತು ಅಸೂಯೆ ಈ ಕೊಲೆಗೆ ಎರಡು ಪ್ರಮುಖ ಕಾರಣಗಳಾಗಿದೆ." ಅಧಿಕಾರಿ ಹೇಳಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸಿದ ಇತರ ಜನರಿಗೆ ಪೊಲೀಸ್ ತಂಡಗಳು ಶೋಧ ನಡೆಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT