ರಾಜ್ಯ

ಹುಬ್ಬಳ್ಳಿ: ಬ್ಲ್ಯಾಕ್ ಫಂಗಸ್ ನಿಂದಾಗಿ ಕಿಮ್ಸ್ ನ 15 ಕೋವಿಡ್ ರೋಗಿಗಳಿಗೆ ಅಂಧತ್ವ

Shilpa D

ಹುಬ್ಬಳ್ಳಿ: ಕಳೆದ ಎರಡು ತಿಂಗಳಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂಧ್ರ) ನಿಂದಾಗಿ 15 ಜನರು ದೃಷ್ಟಿ ಕಳೆದುಕೊಂಡಿದ್ದಾರೆ. 

ಆಸ್ಪತ್ರೆಯು ಮೇ ತಿಂಗಳಿನಿಂದ 150 ಕ್ಕೂ ಹೆಚ್ಚು ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಿದ್ದು, 130 ಕ್ಕೂ ಹೆಚ್ಚು ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ. ಅರವತ್ತು ರೋಗಿಗಳು ಚೇತರಿಸಿಕೊಂಡಿದ್ದಾರೆ.

ಹದಿನೈದು ಜನರು ಸೋಂಕಿನ ಎರಡು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಮತ್ತು ಕೆಲವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ರೋಗಿಗಳ ಪರಿಚಾರಕರು ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಬಳಸುವ  ಬೇಕಾದ ಆಂಫೊಟೆರಿಸಿನ್-ಬಿ ಪೂರೈಕೆ ಔಷಧ ವಿಳಂಬದಿಂದಾಗಿ ತಮ್ಮ ರಕ್ತಸಂಬಂಧಿಗಳು ದೃಷ್ಟಿ ಕಳೆದುಕೊಳ್ಳಲು ಕಾರಣವೆಂದು ಆರೋಪಿಸಿದ್ದಾರೆ.

ಆರಂಭದಲ್ಲಿ ಜಿಲ್ಲೆಯಲ್ಲಿ ಔಷಧದ ಭಾರೀ ಕೊರತೆ ಇತ್ತು. ನಂತರ ಸರಿಪಡಿಸಲಾಯಿತು. ಹೊಸ ಪ್ರಕರಣಗಳು ಕಡಿಮೆಯಾದ್ದರಿಂದ ಬೇಡಿಕೆ ಕುಸಿದಿದೆ. ಹಿರಿಯ ವೈದ್ಯರೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಡವಾಗಿ ಬಂದಿದ್ದರಿಂದ ಕೆಲವರು ದೃಷ್ಟಿ ಕಳೆದುಕೊಂಡರು ಎಂದು ಆರೋಪಿಸಿದ್ದಾರೆ. ಸದ್ಯ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು, ಔಷಧಿ ಕೂಡ ಉತ್ತಮವಾಗಿ ಪೂರೈಕೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

SCROLL FOR NEXT