ರಾಜ್ಯ

ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆಯ ಹಿಂದಿನ ಮಾಸ್ಟರ್'ಮೈಂಡ್ ಅವರ ನಾದಿನಿ ಮಾಲಾ!

Manjula VN

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ನಾದಿನಿ ಮಾಲಾ ಮಾಸ್ಟರ್ ಮೈಂಡ್ ಆಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ರೇಖಾ ಕದಿರೇಶ್ ಹತ್ಯೆಯಾಗುತ್ತಿದ್ದಂತೆ ಅವರ ಹತ್ಯೆಯ ಹಿಂದೆ ಯಾರ ಕೈವಾಡವಿರಬಹುದು ಎನ್ನುವ ಪ್ರಶ್ನೆಯೂ ಕಾಡಲು ಆರಂಭಿಸಿತ್ತು.

ಪ್ರಕರಣ ಸಂಬಂಧ ಪೀಟರ್, ಸೂರ್ಯ, ಅಜಯ್ ಹಾಗೂ ಪುರುಷೋತ್ತಮ್ ಎಂಬುವವರನ್ನು ಬಂಧನಕ್ಕೊಳಗಾಗಿದ್ದಾರೆ. ಇದರಂತೆ ನಿನ್ನೆ ಮಾಲಾ ಹಾಗೂ ಅವರ ಪುತ್ರ ಅರುಳ್ ಅವರನ್ನೂ ವಶಕ್ಕೆ ಪಡೆದಿರುವ ಪೊಲೀರರು ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ, ಹೆಚ್ಚಿನ ವಿಚಾರಣೆಗಾಗಿ ಜು.2ರವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ. 

ಮಾಲಾ 2018ರಲ್ಲಿ ಹತ್ಯೆಯಾದ ರೇಖಾ ಕದಿರೇಶ್ ಅವರ ಪತಿ ಕದಿರೇಶ್ ಅವರ ಹಿರಿಯ ಸಹೋದರಿಯಾಗಿದ್ದಾರೆ. ಹಲವು ವರ್ಷಗಳ ಹಿಂದಿನಿಂದಲೂ ಮಾಲಾ ಅವರಿಗೆ ರೇಖಾ ಮೇಲೆ ದ್ವೇಷವಿತ್ತು. ಮುಂದಿನ ಬಿಬಿಎಂಪಿ ಚುನಾವಣೆಗೆ ತಮ್ಮ ಪುತ್ರಿ ಅಥವಾ ಸೊಸೆಯನ್ನು ನಿಲ್ಲಿಸಬೇಕೆಂದು ಮಾಲಾ ಬಯಸಿದ್ದರು. ರೇಖಾ ಬದುಕಿದ್ದರೆ, ಅದು ಸಾಧ್ಯವಿಲ್ಲ ಎಂದು ತಿಳಿದಿದ್ದರು, ಇದಷ್ಟೇ ಅಲ್ಲದೆ ರೇಖಾ ಅವರ ಬೆಳವಣಿಗೆ ಕಂಡು ಮಾಲಾಗೆ ಮತ್ತಷ್ಟು ದ್ವೇಷ ಹುಟ್ಟಿತ್ತು. 

ಈ ನಡುವೆ ಕದಿರೇಶ್ ಜೊತೆಗಿದ್ದ ವ್ಯಕ್ತಿ ಪೀಟರ್'ಗೂ ರೇಖಾ ಮೇಲೆ ದ್ವೇಷ ಬೆಳೆದಿತ್ತು. ಕದಿರೇಶ್ ಬದುಕಿದ್ದ ಸಂದರ್ಭದಲ್ಲಿ ನೋಡುತ್ತಿದ್ದ ರೀತಿಯಲ್ಲಿ ರೇಖಾ ಈಗ ನೋಡುತ್ತಿಲ್ಲ ಎಂಬ ಪೀಟರ್ ನಲ್ಲಿ ಹುಟ್ಟಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡಿದ್ದ ಮಾಲಾ ಪೀಟರ್'ಗೆ ರೇಖಾ ಮೇಲೆ ದ್ವೇಷ ಬೆಳೆಯುವಂತೆ ಮಾಡಿದ್ದರು. 

ನಂತರ ಮಾಲಾ ಹಾಗೂ ಪೀಟರ್ ಇಬ್ಬರೂ ಸೇರಿಕೊಂಡು ರೇಖಾ ಹತ್ಯೆಗೆ ಸಂಚು ರೂಪಿಸಿದ್ದರು. ಕೆಲ ವ್ಯಕ್ತಿಗಳನ್ನು ಸೇರಿಸಿಕೊಂಡು ರೇಖಾ ಹತ್ಯೆಗೆ ಪೀಟರ್ ಸಂಚು ರೂಪಿಸಿದ್ದ. ಮಾಲಾ ಹತ್ಯೆಗೆ ಸುಪಾರಿ ನೀಡಿದ್ದಳು. ಹತ್ಯೆಯಾದ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದರೂ ಕಾನೂನು ವೆಚ್ಚವನ್ನು ತಾನೇ ಭರಿಸುವುದಾಗಿಯೂ ಹೇಳಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT