ರಾಜ್ಯ

ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚಳ: 6 ದಿನಗಳಲ್ಲಿ 42 ಸಾವು

Srinivas Rao BV

ಮಡಿಕೇರಿ: ಏಪ್ರಿಲ್ ಕೊನೆಯ ವಾರದಿಂದ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು ಸಾವಿನ ಸಂಖ್ಯೆಯೂ ಏರುಗತಿಯಲ್ಲಿದೆ. 

ಜಿಲ್ಲೆಯ ಪರಿಸ್ಥಿತಿ ಸಾರ್ವಜನಿಕರಲ್ಲಿ ಹಾಗೂ ಅಧಿಕಾರಿಗಳಲ್ಲಿ ಆತಂಕ ಮೂಡಿಸುತ್ತಿದ್ದು ಏಪ್ರಿಲ್ ಮೊದಲ 83 ಸಾವಿನ ಪ್ರಕರಣಗಳು ಇದ್ದವು. ಈಗ ತಿಂಗಳಾಂತ್ಯಕ್ಕೆ ಮತ್ತೆ 69 ಸಾವಿನ ಪ್ರಕರಣಗಳು ವರದಿಯಾಗಿವೆ. ಗುರುವಾರದಂದು ಜಿಲ್ಲೆಯಲ್ಲಿ ಕೋವಿಡ್-19 ನಿಂದ 7 ಸಾವು ಸಂಭವಿಸಿದ್ದು ಸಾವಿನ ಒಟ್ಟು ಸಂಖ್ಯೆ 152 ಕ್ಕೆ ಏರಿಕೆಯಾಗಿದೆ. 

"ರೋಗಿಗಳು ಆಸ್ಪತ್ರೆಗೆ ದಾಖಲಾಗುವುದಕ್ಕೆ ತೋರುತ್ತಿರುವ ವಿಳಂಬ ಇದಕ್ಕೆ ಕಾರಣ" ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಹೇಳಿದ್ದಾರೆ. ಮೇ 1 ರಿಂದ ಜಿಲ್ಲೆಯಲ್ಲಿ 42 ಸಾವು ಸಂಭವಿಸಿದ್ದು, ದಿನವೊಂದಕ್ಕೆ ಸರಾಸರಿ 6 ಸಾವು ವರದಿಯಾಗುತ್ತಿದೆ. 

ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ, ಮಡಿಕೇರಿಯಲ್ಲಿರುವ, ಈಗಾಗಲೇ ಸೀಮಿತ ಸಾಮರ್ಥ್ಯ ಹೊಂದಿರುವ ಚಿತಾಗಾರಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ. ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದರಲ್ಲಿ ತೋರುತ್ತಿರುವ ವಿಳಂಬದ ಜೊತೆಗೆ ಕ್ರಿಟಿಕಲ್ ಕೇರ್ ವಿಭಾಗದಲ್ಲಿ ಸಿಬ್ಬಂದಿಯ ಕೊರತೆಯೂ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ ಬೀರುತ್ತಿದೆ. 

SCROLL FOR NEXT