ರಾಜ್ಯ

ಉಲ್ಲೇಖಿತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಯ ದರ ಪರಿಷ್ಕರಿಸಿದ ರಾಜ್ಯ ಸರ್ಕಾರ, ವಿವರ ಹೀಗಿದೆ...

Sumana Upadhyaya

ಬೆಂಗಳೂರು: ಕೊರೋನಾ ಎರಡನೇ ಅಲೆ ತಾಂಡವವಾಡಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದಷ್ಟು ಸಮಸ್ಯೆ ಉಂಟಾಗಿದೆ. ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭ ಮಾಡಿಕೊಂಡು ರೋಗಿಗಳ ಕುಟುಂಬಗಳಿಂದ ಹಣ ಪೀಕುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ.

ಈ ಮಧ್ಯೆ, ಸರ್ಕಾರ ಉಲ್ಲೇಖಿಸುವ ಕೋವಿಡ್ 19 ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ಅದೇ ರೀತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರವನ್ನು ಪರಿಷ್ಕರಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವಾರ್ಡ್ ಗೆ 5,200 ರೂಪಾಯಿ, ಹೆಚ್ ಡಿಯುಗಳಲ್ಲಿ 8 ಸಾವಿರ ರೂಪಾಯಿ, ವೆಂಟಿಲೇಟರ್ ಇಲ್ಲದೆ ಐಸೊಲೇಷನ್ ಐಸಿಯು ವಾರ್ಡ್ ಗೆ 9,750 ರೂಪಾಯಿ, ವೆಂಟಿಲೇಟರ್ ಸಹಿತ ಐಸೊಲೇಷನ್ ಐಸಿಯು ವಾರ್ಡ್ ನಲ್ಲಿ 11,500 ರೂಪಾಯಿ ದರವನ್ನು ಸರ್ಕಾರ ನಿಗದಿಪಡಿಸಿದೆ.

ಪಿಪಿಇ ಮತ್ತು ಇತರ ಅಗತ್ಯ ವೈದ್ಯಕೀಯ ವಸ್ತುಗಳಿಗೆ ಸೇರಿ ಈ ದರ ಅನ್ವಯವಾಗುತ್ತದೆ. ಸರ್ಕಾರದ ಆದೇಶವನ್ನು ಪಾಲಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ, ರೋಗಿಗಳಿಂದ ಹೆಚ್ಚಿನ ದರ ಕೇಳಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಆದೇಶದಲ್ಲಿ ಎಚ್ಚರಿಕೆಯನ್ನು ನೀಡಿದೆ.

SCROLL FOR NEXT