ರಾಜ್ಯ

ಚಾಮರಾಜನಗರ: ಸೋಂಕು ಪ್ರಕರಣ ಹೆಚ್ಚಾದರೆ ಮತ್ತಷ್ಟು ಕೋವಿಡ್ ಕೇರ್ ಕೇಂದ್ರ ಸ್ಥಾಪನೆ- ಎಂ.ಆರ್. ರವಿ

Manjula VN

ಚಾಮರಾಜನಗರ: ಜಿಲ್ಲೆಯಲ್ಲಿ ಇದೇ ರೀತಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಲೇ ಇದ್ದರೆ ಮತ್ತಷ್ಟು ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪನೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಚಾಮರಾಜನಗರ ಉಪ ಆಯುಕ್ತ ಎಂ.ಆರ್.ರವಿಯವರು, ಸೋಂಕು ಪ್ರಕರಣ ಇದೇ ರೀತಿ ಏರಿಕೆಯಾಗುತ್ತಲೇ ಇದ್ದರೆ, ಮತ್ತಷ್ಟು ಕೋವಿಡ್ ಕೇರ್ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತದೆ. ಹಾನೂರು ತಾಲೂಕಿನಲ್ಲಿ ಅತ್ಯಂತ ಕಡಿಮೆ ಪ್ರಕರಣಗಳಿವೆ. ರಾಮಪುರದ ಹಿಂದುಳಿದ ಸಮುದಾಯ ಮತ್ತು ಅಲ್ಪಸಂಖ್ಯಾತ ಹಾಸ್ಟೆಲ್‌ಗಳನ್ನು ಕೋವಿಡ್ ಕೇರ್ ಕೇಂದ್ರವಾಗಿರುವ ಚಿಂತನೆಗಳಿವೆ ಎಂದು ಹೇಳಿದ್ದಾರೆ. 

ಸೋಂಕು ಪ್ರಕರಣ ಹೆಚ್ಚಾದರೆ, ಮತ್ತಷ್ಟು ಕೋವಿಡ್ ಕೇರ್ ಕೇಂದ್ರ ಹಾಗೂ ಹಾಸಿಗೆ ಸಂಖ್ಯೆ ಹೆಚ್ಚಿಸಲು ನಾವು ಸಿದ್ಧರಿದ್ದೇವೆ. ಆದರೆ, ಲಾಜಿಸ್ಟಿಕ್ ಸಮಸ್ಯೆಗಳಿವೆ. ಮಲೆ ಮಹದೇಶ್ವರ ಬೆಟ್ಟ ಬಹಳ ದೂರದಲ್ಲಿದ್ದು, ತುರ್ತು ಸಂದರ್ಭದಲ್ಲಿ ವೈದ್ಯರು, ನರ್ಸ್ ಹಾಗೂ ಇತರೆ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ನಡುವೆ ಕಾಮಗೆರೆ ಗ್ರಾಮದಲ್ಲಿರುವ ಹೋಲಿ ಕ್ರಾಸ್ ಅಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸಂಖ್ಯೆಯನ್ನು ಜಿಲ್ಲಾ ಆಡಳಿತ ಮಂಡಳಿ ಹೆಚ್ಚಳ ಮಾಡಿದೆ. ಸೋಂಕು ಪ್ರಕರಣ ಹೆಚ್ಚಾಗಿದ್ದೇ ಆದರೆ, ರೋಗಿಗಳನ್ನು ಕೊಳ್ಳೇಗಾಲ ಹಾಗೂ ಚಾಮರಾಜನಗರ ಜಿಲ್ಲೆಗೆ ಸ್ಥಳಾಂತರಿಸಲಾಗುತ್ತದೆ ಎಂದಿದ್ದಾರೆ. 

SCROLL FOR NEXT