ರಾಜ್ಯ

ಇಂದು ಬಸವಣ್ಣ ಜಯಂತಿ: ಸಮಾಜ ಸುಧಾರಕನ ಪ್ರತಿಮೆಯ ಬಾಯಿಗೆ ಮಾಸ್ಕ್ ತೊಡಿಸಿ ಜಾಗೃತಿ ಮೂಡಿಸಲು ಹೊಸಮಠ ಸ್ವಾಮೀಜಿ ಪ್ರಯತ್ನ 

Sumana Upadhyaya

ಮೈಸೂರು: 12ನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ ಜಯಂತಿ ಇಂದು. ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಆಂದೋಲನ ಚರಿತ್ರಾರ್ಹವಾಗಿ ಇಂದಿಗೂ ಪ್ರಸ್ತುತ.ಬಸವಣ್ಣನವರ ವಚನಗಳು ಇಂದಿಗೂ ಜನರ ನಾಲಗೆಯಲ್ಲಿ ನಲಿಯುತ್ತಿರುತ್ತದೆ.

ಸಮಾಜದಲ್ಲಿನ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ, ಸ್ತ್ರೀ ಶೋಷಣೆ, ಮೌಢ್ಯ, ವರ್ಣಬೇಧ, ವರ್ಗಬೇಧಗಳ ತಾರತಮ್ಯದಿಂದ ತತ್ತರಿಸಿ ಹೋಗಿದ್ದ ಮಾನವ ಸಮುದಾಯಕ್ಕೆ ದಯೆ, ಪ್ರೀತಿ, ಅನುಕಂಪದ ಮಾನವೀಯ ಸ್ಪರ್ಷವನ್ನು ನೀಡಿದವರು ಬಸವಣ್ಣನವರು.
ಈ ಬಾರಿ ಬಸವಣ್ಣ ಜಯಂತಿ ದಿನ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳಿಲ್ಲ. ಜನರು ಗುಂಪು ಸೇರಿ ಆಚರಣೆಗಳಿಲ್ಲ. ಎಲ್ಲ ಕಡೆಯೂ ಭಯ, ಆತಂಕದ ವಾತಾವರಣವಿದೆ. ಜನರು ಬಾಯಿ, ಮೂಗಿಗೆ ಮಾಸ್ಕ್ ಹಾಕದೆ ಹೊರಗೆ ಹೋಗುವಂತೆಯೇ ಇಲ್ಲ.

ಈ ಪರಿಸ್ಥಿತಿಯಲ್ಲಿ ಬಸವಣ್ಣನವರ ಮೂರ್ತಿಗೆ ಹೂವು-ಹಾರ ಹಾಕಿ ಗೌರವ ಸಲ್ಲಿಸಿದ ನಂತರ ಬಾಯಿಗೆ ಮಾಸ್ಕ್ ಹಾಕಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮೈಸೂರಿನಲ್ಲಿಂದು ಹೊಸಮಠದ ಶ್ರೀಗಳಾದ ಚಿದಾನಂದ ಸ್ವಾಮೀಜಿ ಮಾಡಿದ್ದಾರೆ.

SCROLL FOR NEXT