ರಾಜ್ಯ

240 ಟನ್ ಆಕ್ಸಿಜನ್ ಹೊತ್ತ ರೈಲು ಇಂದು ನಗರಕ್ಕೆ ಆಗಮನ

Manjula VN

ಬೆಂಗಳೂರು: ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಲ್ಲಿ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಆಕ್ಸಿಜನ್ ಸಾಗಣೆ ಮಾಡುವ ಎರಡು ರೈಲುಗಳು ಶನಿವಾರ ಬೆಂಗಳೂರಿಗೆ ಆಗಮಿಸಲಿವೆ.

ಮೇ 15ರ ಬೆಳಗ್ಗೆ 5 ಗಂಟೆಗೆ 120 ಟನ್ ಆಕ್ಸಿಜನ್ ಹೊತ್ತ ರೈಲು ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಆಗಮಿಸಲಿದೆ. ಓಡಿಶಾ ರಾಜ್ಯದ ಕಾಳಿಂಗ ನಗರದಿಂದ ಶುಕ್ರವಾರ ಮಧ್ಯಾಹ್ನ 3.10ಕ್ಕೆ ರೈಲು ಹೊರಟಿದೆ.

ಜಾರ್ಖಂಡ್‌ನ ಟಾಟಾ ನಗರದಿಂದ 120 ಟನ್ ಆಕ್ಸಿಜನ್ ಹೊತ್ತ ರೈಲು ಶುಕ್ರವಾರ ಮಧ್ಯಾಹ್ನ 12.40ಕ್ಕೆ ಹೊರಟಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಶನಿವಾರ ಸಂಜೆ 5 ಗಂಟೆಗೆ ತಲುಪಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

ಈ ಎರಡೂ ರೈಲುಗಳು 6 ಆಕ್ಸಿಜನ್ ಕಂಟೈನರ್‌ಗಳನ್ನು ಒಳಗೊಂಡಿವೆ. ಎರಡೂ ರೈಲುಗಳಿಂದ ಒಟ್ಟು 240 ಟನ್ ಆಕ್ಸಿಜನ್ ಬೆಂಗಳೂರಿಗೆ ಬರಲಿದೆ. ಬಳಿಕ ಸರ್ಕಾರ ಅವುಗಳನ್ನು ಜಿಲ್ಲೆಗೆ ಸಾಗಣೆ ಮಾಡಲಿದೆ.

ಕರ್ನಾಟಕಕ್ಕೆ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಬುಧವಾರ ಆಗಮಿಸಿತ್ತು. 2 ಮತ್ತು 3ನೇ ರೈಲುಗಳು ಶನಿವಾರ ಬರಲಿವೆ. ಆಕ್ಸಿಜನ್ ಪೂರೈಕೆಯಿಂದಾಗಿ ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅನುಕೂಲವಾಗಲಿದೆ.

SCROLL FOR NEXT