ರಾಜ್ಯ

ಅಯೋಧ್ಯೆಯ ರಾಮ ಮಂದಿರಕ್ಕಾಗಿ ಕುಂಭಾಶಿಯಲ್ಲಿ ಬ್ರಹ್ಮರಥ ನಿರ್ಮಾಣ ಕಾರ್ಯ ಪ್ರಾರಂಭ

Raghavendra Adiga

ಕುಂದಾಪುರ: ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬ್ರಹ್ಮರಥ (ತೇರು) ನಿರ್ಮಾಣವು ಅಕ್ಷಯ ತೃತೀಯದ ಶುಭ ದಿನದಂದು ಕುಂದಾಪುರದ ಸಮೀಪದ ಕುಂಭಾಶಿಯಲ್ಲಿ ಪ್ರಾರಂಭವಾಗಿದೆ.

ಸುಮಾರು 4 ಕೋಟಿ ರೂ. ವೆಚ್ಚದ ಈ ಬ್ರಹ್ಮರಥ ಪೂರ್ಣಗೊಂಡ ನಂತರ ಕಿಷ್ಕಿಂದೆಯ ಹನುಮ ಜನ್ಮಭೂಮಿ ಕ್ಷೇತ್ರದ ಪರವಾಗಿ ರಾಮ ಮಂದಿರಕ್ಕೆ ಸೇರಲಿದೆ.

ಪ್ರಸಿದ್ದ ಶಿಲ್ಪಿಗಳಾದ ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ನಿನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯರು 50 ನುರಿತ ಕುಶಲಕರ್ಮಿಗಳ ತಂಡದ ಸಹಾಯದಿಂದ ಬ್ರಹ್ಮರಥದ ನಿರ್ಮಾಣ ಮಾಡಲಿದ್ದಾರೆ. ಈ ರಥ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ರಥದ ಮಾದರಿಯಲ್ಲಿರಲಿದೆ.

84 ಅಡಿ ಎತ್ತರ ಮತ್ತು 26 ಅಡಿ ಅಗಲದ ರಥದಲ್ಲಿ 10 ಅಡಿ ಎತ್ತರದ ಚಕ್ರಗಳಿವೆ. ರಥದ ಮಂಟಪ ಐದು ಅಡಿಗಳಿದ್ದರೆ, ಕಲಶ ಸಹ ಅಷ್ಟೇ ಎತ್ತರವನ್ನು ಹೊಂದಿರಲಿದೆ. ರಥದ ತೂಕ 50 ಟನ್ ಆಗಿರಲಿದೆ.

SCROLL FOR NEXT