ರಾಜ್ಯ

ಬೆಂಗಳೂರು: ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ಲೋಕೋ ಪೈಲಟ್ ನೆರವು

Manjula VN

ಬೆಂಗಳೂರು: ಲೋಕೋ ಪೈಲಟ್ ಒಬ್ಬರು ನೀಡಿದ ಮಾಹಿತಿಯೊಂದು ನಗರದ ಪೊಲೀಸರು 24 ಗಂಟೆಗಳಲ್ಲಿ ಕೊಲೆ ಪ್ರಕರಣವೊಂದನ್ನು ಭೇದಿಸಲು ನೆರವಾಗಿದೆ. 

ಮೈಸೂರು-ಕಾಚಿಗೂಡ ಎಕ್ಸ್'ಪ್ರೆಸ್ ರೈಲು ಚಲಿಸುತ್ತಿದ್ದು, ಕಸ್ತೂರಿ ನಗರದ ರೈಲ್ವೇ ಟ್ರ್ಯಾಕ್ ಬಳಿ ಮೃತದೇಹವೊಂದು ಬಿದ್ದಿರುವುದ್ನನು ಲೋಕೋ ಪೈಲಟ್ ಗಮನಿಸಿದ್ದಾರೆ. ಈ ವೇಳೆ 40 ಅಡಿ ದೂರದಲ್ಲಿಯೇ ರೈಲು ನಿಲ್ಲಿಸಿದ್ದಾರೆ. ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ಮಾಹಿತಿ ತಿಳಿದ ಕೂಡಲೇ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಂತಕರು ಕೊಲೆ ಪ್ರಕರಣವನ್ನು ಆತ್ಮಹತ್ಯೆಯೆಂದು ಬಿಂಬಿಸಲು ಯತ್ನಿಸಿದ್ದರು. ಆದರೆ, ಲೋಕೋಪೈಲಟ್ ನೀಡಿದ ಮಾಹಿತಿ ನೆರವಿನಿಂದ ಕೊಲೆ ಪ್ರಕರಣವನ್ನು 24 ಗಂಟೆಗಳಲ್ಲಿ ಭೇದಿಸಲಾಯಿತು. 

ರೈಲ್ವೇ ಹಳಿಗಳ ಮೇಲೆ ಬಿದ್ದಿದ್ದ ಮೃತದೇಹ 48 ವರ್ಷದ ಲೋಕನಾಥ್ ಎಂಬ ವ್ಯಕ್ತಿಯದ್ದಾಗಿತ್ತು. ಈತ ಶಕ್ತಿನಗರ ನಿವಾಸಿಯಾಗಿದ್ದಾರೆ. ಪ್ರಕರಣ ಸಂಬಂಧ ಆತನ ಪತ್ನಿ ಯಶೋಧ (40) ಹಾಗೂ ಆಕೆಯ ಸ್ನೇಹಿತರಾದ ಮುನಿರಾಜು  (33), ಪ್ರಭು ಪಿ (27) ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT