ರಾಜ್ಯ

ದಾವಣಗೆರೆಯ ಈ ಎರಡು ಗ್ರಾಮಸ್ಥರಿಗೆ ಕಾಡುತ್ತಿದೆ ಸಾವಿನ ಭಯ!

Raghavendra Adiga

ದಾವಣಗೆರೆ: ಹರಿಹರ ತಾಲೂಕಿನ ಕದರನಾಯಕನಹಳ್ಳಿ ಮತ್ತು ಮುದಹದಡಿ ಗ್ರಾಮಗಳನ್ನು ಸಾವಿನ ಸೂತಕ ಕಾಡಲಾರಂಭಿಸಿದೆ.

ಕದರನಾಯಕನಹಳ್ಳಿ ಒಂದರಲ್ಲೇ ಕಳೆದ 15 ದಿನಗಳಲ್ಲಿ ಸುಮಾರು 22 ಜನರು ಸಾವನ್ನಪ್ಪಿದ್ದರೆ ಮುದಹದಡಿಯಲ್ಲಿ 10 ದಿನಗಳಲ್ಲಿ 13 ಸಾವು ಸಂಭವಿಸಿದೆ.ಗ್ರಾಮಸ್ಥರು ಕೋವಿಡ್ -19 ಭಯದಲ್ಲಿ ಸಿಲುಕಿದ್ದು  ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮೂಕರಾಗಿದ್ದಾರೆ.

ಬೆಂಗಳೂರು ಮತ್ತು ಇತರ ಹೆಚ್ಚು ಸೋಂಕು ಇರುವ  ಜಿಲ್ಲೆಗಳ ಜನರ ಆಗಮನವು ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಕದರನಾಯಕನಹಳ್ಳಿಯಲ್ಲಿ ಇಬ್ಬರು ರು ಕೋವಿಡ್ -19 ನಿಂದ ಸಾವನ್ನಪ್ಪಿದ್ದರೆ, ಉಳಿದ 20 ಜನರು ಹೃದಯ ಸ್ತಂಭನ, ಲೋ ಬಿಪಿ ಮತ್ತು ಇತರ ಸಮಸ್ಯೆಯಿಂದ  ಸಾವನ್ನಪ್ಪಿದ್ದಾರೆ.

ಕೆಲವು ಜನರು ಜ್ವರದಿಂದ ಬಳಲುತ್ತಿರುವಾಗ, 110 ಜನರು ಪರೀಕ್ಷೆಗೆ ಒಳಗಾದರು, ಅದರಲ್ಲಿ 19 ಜನರು ಪಾಸಿಟಿವ್ ವರದಿ ಪಡೆದರು. ಅವರೀಗ ಹೋಂ ಐಸೋಲೇಷನ್ ನಲ್ಲಿದ್ದಾರೆ.ಅವರಿಗೆ ಈಗ ಇಡೀ ಹಳ್ಳಿಯನ್ನು ತ್ವರಿತವಾಗಿ ಪರೀಕ್ಷಿಸುವ ಅಗತ್ಯವಿರುತ್ತದೆ ಮತ್ತು ಶೀಘ್ರದಲ್ಲೇ ವರದಿಯನ್ನು ಪಡೆದುಕೊಳ್ಳುವುದರಿಂದ ಅವರ ಭಯ ಕಡಿಮೆಯಾಗಲಿದೆ.

SCROLL FOR NEXT