ರಾಜ್ಯ

ಅಕ್ರಮ ಗುಟ್ಕಾ ತಯಾರಿಕೆ: ಇಬ್ಬರ ಬಂಧನ, ಮತ್ತಿಬ್ಬರು ಪರಾರಿ

Srinivasamurthy VN

ವಿಜಯಪುರ: ಅಕ್ರಮವಾಗಿ ಗುಟ್ಕಾ ತಯಾರಿಕೆ ಆರೋಪದ ಮೇರೆಗೆ ಹಿಪ್ಪರಗಿ‌ ಪಟ್ಟಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೌದು...ಪರವಾನಗಿ ಇಲ್ಲದೇ ಗುಟ್ಕಾ ತಯಾರಿಸುತ್ತಿದ್ದ ಇಬ್ಬರನ್ನು ಜಿಲ್ಲೆಯ ಹಿಪ್ಪರಗಿ‌ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಾದರ್​ ಬಾಷಾ, ಬಸವರಾಜ್ ಆವಟಿ ಎಂಬುವವರೇ ಬಂಧಿತ ವ್ಯಕ್ತಿಗಳಾಗಿದ್ದು, ಉಳಿದ ಆರೋಪಿಗಳಾದ ಮುಬಾರಕ್, ಸಂಗಮೇಶ್​ ಪರಾರಿಯಾಗಿದ್ದಾರೆ. 

ಅಕ್ರಮವಾಗಿ ತಯಾರಿಸಿದ್ದ 60 ಸಾವಿರಕ್ಕೂ ಹೆಚ್ಚು ಮೌಲ್ಯದ ಗುಟ್ಕಾ ವಸ್ತುಗಳನ್ನು ಬಂಧಿತ ವ್ಯಕ್ತಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿಗಳು ಪರವಾನಿಗೆ ಇಲ್ಲದೆ ಮಾವಾ ತಯಾರಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ದಾಳಿ ವೇಳೆ 35 ಕೆಜಿ ಮಾವಾ, 80ಕೆ.ಜಿ‌ ಅಡಿಕೆ, 2ಕೆ‌ಜಿ‌  ತಂಬಾಕು,23 ಕೆ.ಜಿ ಸುಣ್ಣ 2 ಮೊಬೈಲ್ ಸೇರಿ 60 ಸಾವಿರಕ್ಕೂ ಹೆಚ್ಚು ಬೆಲೆ‌ ಬಾಳುವ ಗುಟ್ಖಾ ಜಪ್ತಿ ಮಾಡಿಕೊಳ್ಳಲಾಗಿದೆ.
 

SCROLL FOR NEXT