ರಾಜ್ಯ

ಲಸಿಕಾ ಅಭಿಯಾನ: ದಕ್ಷಿಣ ಭಾರತದಲ್ಲಿ ಕರ್ನಾಟಕ ನಂ .1 - ಸಚಿವ ಸುಧಾಕರ್

Raghavendra Adiga

ಬೆಂಗಳೂರು:  ಜಗತ್ತಿನ ಬಹುದೊಡ್ಡ ಲಸಿಕಾ ಅಭಿಯಾನವಾಗಿರುವ ಬಾರತದ ಕೊರೋನಾ ವಿರುದ್ಧ ಲಸಿಕಾ ಅಭಿಯಾನದಲ್ಲಿ ದಕ್ಷಿಣ ಭಾರತದ ರಾಜ್ಯದ ಪೈಕಿ  ಕರ್ನಾಟಕ ನಂ .1 ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವರು "ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಕ್ಷಿಣ ಭಾರತದ ನಂ .1 ರಾಜ್ಯವಾಗಿದೆ. ಕೇಂದ್ರದಿಂದ ಲಸಿಕೆ ಪೂರೈಕೆ ಚುರುಕುಗೊಳ್ಳುತ್ತಿರುವುದರಿಂದ, ಲಸಿಕಾ ಅಭಿಯಾನ ಇನ್ನಷ್ಟು ಬೇಗ ಮುನ್ನಡೆಯಲಿದೆ. ರಾಜ್ಯಕ್ಕೆ ನಿನ್ನೆ 80,000 ಡೋಸ್ ಕೋವಾಕ್ಸಿನ್ ಹಾಗೂ 2,17,310 ಡೋಸ್ ಕೊವಿಶೀಲ್ಡ್ ಪೂರೈಸಿದ ಕೇಂದ್ರಕ್ಕೆ ಧನ್ಯವಾದಗಳು." ಎಂದರು.

ಇನ್ನು "ಭಾರತವು ಇದುವರೆಗೂ 20 ಕೋಟಿ ಜನರಿಗೆ ಲಸಿಕೆ ನೀಡಿದೆ. ಆದರೆ ರಾಜಕೀಯ ಪ್ರೇರಿತ ಪ್ರಚಾರವು ಸಂಪೂರ್ಣ ವ್ಯಾಕ್ಸಿನೇಷನ್ ಪ್ರಕ್ರಿಯೆ ಮತ್ತು ಚಾಲನೆಯ ಬಗ್ಗೆ ಆಧಾರವಿಲ್ಲದ ವದಂತಿಗಳನ್ನು ಹರಡುತ್ತಿದೆ. " ಎಂದಿದ್ದಾರೆ.

SCROLL FOR NEXT