ಸಾಂದರ್ಭಿಕ ಚಿತ್ರ 
ರಾಜ್ಯ

ಅಕ್ಟೋಬರ್ ನಲ್ಲಿ ರಾಜ್ಯದಲ್ಲಿ ಜೆಎಸ್ ಟಿ ಸಂಗ್ರಹದಲ್ಲಿ ಶೇ.18 ರಷ್ಟು ಭಾರಿ ಏರಿಕೆ

 ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಶೇಕಡಾ 18 ರಷ್ಟು ಭಾರಿ  ಏರಿಕೆಯಾಗಿದೆ. 

ಬೆಂಗಳೂರು: ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಶೇಕಡಾ 18 ರಷ್ಟು ಭಾರಿ  ಏರಿಕೆಯಾಗಿದೆ. ಉತ್ತಮ ಸಂಗ್ರಹಣೆ, ಅನುಸರಣೆ ಮತ್ತು ಎಲ್ಲಾ ಇಲಾಖೆಗಳಿಂದ ಪ್ರಯತ್ನದ ಕಾರಣದಿಂದ ಈ ಬಾರಿ ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಭಾರಿ ಹೆಚ್ಚಳವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್‌ಡೌನ್  ನಂತರ ಜಾರಿ ಚಟುವಟಿಕೆಗಳು ಸ್ಥಿರವಾಗಿ ಬೆಳೆದಿದ್ದು, ತೆರಿಗೆ ವಂಚಕರು ಮತ್ತು ವಂಚನೆ ಪ್ರಕರಣಗಳ ತಪಾಸಣೆ ಮತ್ತು ತೆರಿಗೆ ತಪ್ಪಿಸುವಿಕೆಯನ್ನು ಪ್ರಮುಖ ಆದ್ಯತೆಯ ಮೇಲೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು) ಐ ಎಸ್ ಎನ್ ಪ್ರಸಾದ್ ಮತ್ತು ವಾಣಿಜ್ಯ ತೆರಿಗೆ ಕಮಿಷನರ್ ಸಿ ಶಿಖಾ ಅವರು  ವಿವರಿಸಿದರು. 

“ತಂತ್ರಜ್ಞಾನ ವೇದಿಕೆ ಸ್ಥಿರಗೊಂಡಿರುವುದರಿಂದ ಜಿಎಸ್‌ಟಿ ಸಂಗ್ರಹ ಹೆಚ್ಚಾಗಿದೆ. ತಪ್ಪು ಇನ್ಪುಟ್ ತೆರಿಗೆ ಸಾಲ ಕಂಡುಹಿಡಿಯಲು ಅವರು ಸಮರ್ಥರಾಗಿದ್ದಾರೆ.  ಅನುಸರಣೆ ಕೂಡ ಹೆಚ್ಚಾಗಿದೆ. ಇವುಗಳು ಹೆಚ್ಚಾಗುತ್ತಲೇ ಇರುತ್ತವೆ ಮತ್ತು ಜಿಎಸ್‌ಟಿ ಸಂಗ್ರಹವು ವೇಗವಾಗಿ ಬೆಳೆಯಲಿದೆ ಎಂದು ರಾಷ್ಟ್ರೀಯ ಹಣಕಾಸು ಆಯೋಗದ ಮಾಜಿ ಸದಸ್ಯ ಪ್ರೊ.ಗೋವಿಂದ್ ರಾವ್ ಹೇಳಿದ್ದಾರೆ. ಉತ್ತಮ ಸಂಗ್ರಹಣೆ ಖಚಿತಪಡಿಸಿಕೊಳ್ಳಲು ವಾಣಿಜ್ಯ ತೆರಿಗೆ ಇಲಾಖೆ ಹಲವಾರು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.

 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಜಾರಿ ವಿಭಾಗದಂತಹ ಸೂಕ್ಷ್ಮ ಹುದ್ದೆಗಳಿಂದ ಸೂಕ್ಷ್ಮವಲ್ಲದ ವಿಭಾಗಗಳಿಗೆ ಅಧಿಕಾರಿಗಳನ್ನು ನಿಯಮಿತವಾಗಿ ವರ್ಗಾವಣೆ ಮಾಡಲಾಗುತ್ತದೆ. ಇಲಾಖಾ ಲೆಕ್ಕ ಪರಿಶೋಧನೆ ಚುರುಕುಗೊಳ್ಳುತ್ತಿದೆ. ತೆರಿಗೆದಾರರು ಆಡಿಟ್ ಅವಲೋಕನಗಳ ಮೇಲೆ ಪಾವತಿಗಳನ್ನು ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಮತ್ತು ಕೆಲವು ಅವಧಿಗೆ, ಜಾರಿ ಚಟುವಟಿಕೆಗಳಲ್ಲಿ ಸ್ವಲ್ಪ ನಿಧಾನಗತಿಯಿತ್ತು, ಅದು ಈಗ ಏರಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT