ರಾಜ್ಯ

ಕರ್ನಾಟಕ ಸಿವಿಲ್ ಕಟ್ಟಡ ನಿರ್ಮಾಣ ಸಮೂಹದ ಮೇಲೆ ಐಟಿ ದಾಳಿ: 70 ಕೋಟಿ ರೂ. ಕಪ್ಪು ಹಣದ ಆದಾಯ ಪತ್ತೆ!

Srinivas Rao BV

ನವದೆಹಲಿ: ಕರ್ನಾಟಕದಲ್ಲಿ ಮುಂಚೂಣಿಯಲ್ಲಿರುವ ಸಿವಿಲ್ ಕಟ್ಟಡ ನಿರ್ಮಾಣ ಸಮೂಹದ ಮೇಲೆ ದಾಳಿ ನಡೆದ ಬಳಿಕ 70 ಕೋಟಿಗೂ ಹೆಚ್ಚು ದಾಖಲೆಗಳಿಲ್ಲದ ಆದಾಯ ಪತ್ತೆಯಾಗಿದೆ ಎಂದು ಸಿಬಿಡಿಟಿ ಹೇಳಿದೆ. 

ಅ.28 ರಂದು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಶೋಧಕಾರ್ಯಾಚರಣೆಯನ್ನು ನಡೆಸಲಾಗಿತ್ತು. 

"ಈ ಶೋಧಕಾರ್ಯಾಚರಣೆಯಲ್ಲಿ 70 ಕೋಟಿಯಷ್ಟು ದಾಖಲೆಗಳಿಲ್ಲದ ಆದಾಯ ಪತ್ತೆಯಾಗಿದೆ. ಸಂಸ್ಥೆ ಸಹ ಇದನ್ನು ಒಪ್ಪಿದೆ" ಎಂದು ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.

ಸಿಬಿಡಿಟಿ ತೆರಿಗೆ ಇಲಾಖೆಗೆ ನೀತಿ ರೂಪಿಸುವ ಸಂಸ್ಥೆಯಾಗಿದೆ. ಸರಕುಗಳ ಖರೀದಿಯಲ್ಲಿ, ಕಾರ್ಮಿಕರ ಖರ್ಚು ವೆಚ್ಚಗಳಲ್ಲಿ ಉಪ ಗುತ್ತಿಗೆದಾರರಿಗೆ ಹಣಪಾವತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಾಭವನ್ನು ಮರೆ ಮಾಚಿದೆ ಎಂಬ ಆರೋಪ ಸಂಸ್ಥೆಯ ಮೇಲಿದೆ. 

ವಶಪಡಿಸಿಕೊಂಡ ದಾಖಲೆಗಳ ಪ್ರಕಾರ ದಾಖಲೆಗಳಿಲ್ಲದ ನಗದನ್ನು ಇಂತಹ ವಸ್ತುಗಳ ಮಾರಾಟಗಾರರು / ಪೂರೈಕೆದಾರರಿಂದ ಸಮೂಹ ಸಂಸ್ಥೆಗಳ ಪ್ರಮುಖ ವ್ಯಕ್ತಿಗಳು ಪಡೆದಿದ್ದರು. 

ಸಂಸ್ಥೆಯ ಮಾಲಿಕರ, ಯಾವುದೇ ಕೆಲಸವನ್ನೂ ಮಾಡದ ಕುಟುಂಬ ಸದಸ್ಯರು, ಸ್ನೇಹಿತರು, ಉದ್ಯೋಗಿಗಳನ್ನೇ ಉಪಗುತ್ತಿಗೆದಾರರ ಹೆಸರಿನಲ್ಲಿ ಹಣ ಪಡೆದು ಲಾಭ ಮರೆಮಾಚುವುದಕ್ಕೆ ಸಹಕರಿಸುತ್ತಿದ್ದರು ಎಂದು ಸಿಬಿಡಿಟಿ ಹೇಳಿದೆ.

SCROLL FOR NEXT