ರಾಜ್ಯ

ಹಾಸನಾಂಬೆ ದೇವಿಯ ದರ್ಶನಕ್ಕೆ ತೆರೆ: ಗರ್ಭಗುಡಿ ಬಾಗಿಲು ಬಂದ್

Nagaraja AB

ಹಾಸನ: ಹಾಸನಾಂಬೆ ದೇವಿಯ ದರ್ಶನಕ್ಕೆ ತೆರಿ ಬಿದಿದ್ದೆ, ಅಕ್ಟೋಬರ್ 28 ರಿಂದ ತೆರೆಯಲಾಗಿದ್ದ ಹಾಸನಾಂಬೆ ದೇವಾಲಯದ ಗುರ್ಭಗುಡಿ ಬಾಗಿಲನ್ನು ಇಂದು ಮಧ್ಯಾಹ್ನ  1 ಗಂಟೆ 5 ನಿಮಿಷಕ್ಕೆ ಮುಚ್ಚಲಾಯಿತು. 

ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಯಿತು. ಕಳೆದ 10 ದಿನಗಳಿಂದ ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಮುಂದಿನ ಒಂದು ವರ್ಷದವರೆಗೆ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚಿರಲಿದೆ. 

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಗೋಪಾಲಯ್ಯ, ಅಕ್ಟೋಬರ್ 28 ರಿಂದ ತೆರೆಯಲಾಗಿದ್ದ ಹಾಸನಾಂಬೆ ದೇವಸ್ಥಾನವನ್ನು ಇಂದು ಮಧ್ಯಾಹ್ನ ಮುಚ್ಚಲಾಯಿತು. ಈ ಬಾರಿ ಬಹಳ ವ್ಯವಸ್ಥಿತವಾಗಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, 4 ಲಕ್ಷ ಭಕ್ತರು ದೇವರ ದರ್ಶನ ಪಡೆದಿದ್ದಾರೆ. ದರ್ಶನ ವೇಳೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT