ರಾಜ್ಯ

ತಮ್ಮ ಕೆಲಸಕ್ಕಾಗಿ ಪೊಲೀಸರು ನನ್ನ ಮಗನನ್ನು ಬಳಸಿಕೊಳ್ಳುತ್ತಿದ್ದಾರೆ: ಶ್ರೀಕಿ ತಂದೆ ಆರೋಪ

Manjula VN

ಬೆಂಗಳೂರು: ತಮ್ಮ ಕೆಲಸಗಳ ಪೂರ್ಣಗೊಳಿಸಿಕೊಳ್ಳುವ ಸಲುವಾಗಿ ಪೊಲೀಸರೇ ಡ್ರಗ್ಸ್ ಬಳಸುತ್ತಿದ್ದಾರೆಂದು ಹ್ಯಾಕರ್ ಶ್ರೀಕಿ ತಂದೆ ಗೋಪಾಲ್ ರಮೇಶ್ ಅವರು ಶುಕ್ರವಾರ ಆರೋಪಿಸಿದ್ದಾರೆ.

ಈ ಕುರಿತು ನ್ಯಾಯಾಲಾಯದ ಮೆಟ್ಟಿಲೇರಿರುವ ಶ್ರೀಕಿ ತಂದೆ ಗೋಪಾಲ್ ರಮೇಶ್ ಅವರು, ಪೊಲೀಸ್ ಕಸ್ಟಡಿಯಲ್ಲಿ ನನ್ನ ಮಗನಿಗೆ ಮಾದಕ ವಸ್ತುಗಳನ್ನು ನೀಡುತ್ತಿದ್ದಾರೆ. ಆತನಿಂದ ಒತ್ತಾಯಪೂರಕ ಹೇಳಿಕೆ ಪಡೆಯುತ್ತಿದ್ದಾರೆ. ಆತನಿಂದ ಬೇರೆ ಬೇರೆ ಕೆಲಸ ಮಾಡಿಸುವ ಯೋಚನೆ ಅವರಿಗಿದೆ. ನನ್ನ ಮಗನೇ ನ್ಯಾಯಾಧೀಶರ ಮುಂದೆ ಹೇಳಿರುವುದರಿಂದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಿ. ಪೊಲೀಸರ ವಿರುದ್ಧ ಎಫ್​ಐಆರ್ ದಾಖಲಿಸಿ ಎಂದು ಅರ್ಜಿ ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.

ಇದಕ್ಕೆ ಉತ್ತರವಾಗಿ ವಿಚಾರಣೆ ವೇಳೆ ಡ್ರಗ್ಸ್ ನೀಡಿಲ್ಲ ಎಂದು ಪೊಲೀಸರು ನ್ಯಾಯಾಲಯದ ಮುಂದೆ ಉತ್ತರಿಸಿದ್ದು,  ಈ ಸಂಬಂಧ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪಿ ಶ್ರೀಕೃಷ್ಣನಿಗೆ ಮೂತ್ರ ಹಾಗೂ ರಕ್ತ ಮಾದರಿ ಪರೀಕ್ಷೆ ಡೆಸಿ ವರದಿ ನೀಡುವಂತೆ ಪೊಲೀಸರಿಗೆ ತಿಳಿಸಿದೆ ಎಂದು ವರದಿಗಳು ತಿಳಿಸಿವೆ.

ಫೈವ್ ಸ್ಟಾರ್ ಹೋಟೆಲ್​​ನಲ್ಲಿ ಉಳಿದುಕೊಂಡಿದ್ದ ಶ್ರೀಕಿ ಹಾಗೂ ಭೀಮಾ ಜ್ಯುವೆಲರ್ಸ್ ಮಾಲೀಕರ ಮಗ ವಿಷ್ಣು ಭಟ್ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಹೋಟೆಲ್​ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಜೀವನ್ ಭೀಮಾನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಜಾಮೀನಿನ ಮೇಲೆ ಶ್ರೀಕಿ ಹೊರಬಂದಿದ್ದಾನೆ.

SCROLL FOR NEXT