ರಾಜ್ಯ

ಪ್ರಯಾಣಿಕರ ಕೋರಿಕೆಯಂತೆ ನ.18 ರಿಂದ ನಮ್ಮ ಮೆಟ್ರೋ ಸೇವೆ ರಾತ್ರಿ 11 ಗಂಟೆಯವರೆಗೆ ವಿಸ್ತರಣೆ

Nagaraja AB

ಬೆಂಗಳೂರು: ಪ್ರಯಾಣಿಕರ ಕೋರಿಕೆಯಂತೆ ಬೆಂಗಳೂರು ಮೆಟ್ರೋ ರೈಲು ನಿಗಮ( ಬಿಎಂಆರ್ ಸಿಎಲ್ ) ನಮ್ಮ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯವರೆಗೂ ವಿಸ್ತರಿಸಿದೆ.

ವಾರದ ದಿನಗಳಲ್ಲಿ ನಗರದ ಎಲ್ಲ ಮೆಟ್ರೋ ಟರ್ಮಿನಲ್ ನಿಲ್ದಾಣಗಳಲ್ಲಿ ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಬೆಳಗ್ಗೆ 6 ಗಂಟೆಗೆ ದಿನದ ಮೊದಲ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ. ಭಾನುವಾರ ಮೊದಲು ರೈಲು ಬೆಳಗ್ಗೆ 7ಕ್ಕೆ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ದಿನದ ಕೊನೆಯ ರೈಲು ರಾತ್ರಿ 11 ಗಂಟೆಗೆ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್ ನ ನಾಡಪ್ರಭು ಕೇಂಪೇಗೌಡ ಇಂಟರ್ ಚೇಂಜ್ ನಿಲ್ದಾಣದಿಂದ ಕೊನೆಯ ರೈಲುಗಳು ರಾತ್ರಿ 11-30ಕ್ಕೆ ಹೊರಡಲಿವೆ.

ಸಾರ್ವಜನಿಕರಿಂದ ಬೇಡಿಕೆ ಬಂದಿದ್ದರಿಂದ ರಾತ್ರಿ ವೇಳೆ ಮೆಟ್ರೋ ವಾಣಿಜ್ಯ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ರಾತ್ರಿ ಕರ್ಫ್ಯೂ ಹಿಂಪಡೆದ ಬಳಿಕ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ ರಾತ್ರಿ ಮೆಟ್ರೋ ಸೇವೆ ವಿಸ್ತರಿಸಿದ ಬಳಿಕ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಳವಾಗಲಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ. 

SCROLL FOR NEXT