ರಾಜ್ಯ

ಆನೆ ನಡೆದದ್ದೇ ದಾರಿ: ಆಳೆತ್ತರದ ರೈಲ್ವೆ ಕಂಬಿ ದಾಟಿ ಕಾಡಿನಿಂದ ಹೊರಗೆ ಬಂದ ಗಜರಾಜ, ವಿಡಿಯೋ!

Vishwanath S

ಚಾಮರಾಜನಗರ: ವನ್ಯಜೀವಿಗಳ ಉಪಟಳ ತಡೆಗಾಗಿ ಅರಣ್ಯ ಇಲಾಖೆ ಕಾಡಂಚಿನಲ್ಲಿ ಅಳವಡಿಸಿದ್ದ ಎತ್ತರದ ರೈಲ್ವೆ ಕಂಬಿಯ ರೇಲಿಂಗ್ಸ್ ಅನ್ನು ಸಲಗವೊಂದು ದಾಟಿ ಕಾಡಿಂದ ಹೊರ ಬಂದಿರುವ ಘಟನೆ ಬಂಡೀಪುರ ವ್ಯಾಪ್ತಿಯ ಓಂಕಾರ್ ವಲಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಅರಣ್ಯ ಇಲಾಖೆ ಆನೆಗಳು ಅರಣ್ಯದಿಂದ ಹೊರಬರದಂತೆ ಕಾಡಂಚಿನಲ್ಲಿ ಎತ್ತರವಾದ ರೈಲ್ವೆ ಕಂಬಿ ರೇಲಿಂಗ್ಸ್ ಅಳವಡಿಸಿದೆ.

ಆದರೆ ಇಂದು ಸಲಗವೊಂದು ಎತ್ತರವಾದ ರೈಲ್ವೆ ಕಂಬಿ ರೇಲಿಂಗ್ಸ್ ಅನ್ನು ಕೇರ್ ಮಾಡದೇ ರೇಲಿಂಗ್ಸ್ ಅನ್ನು ದಾಟಿ ಕಾಡಿನಿಂದ ಹೊರಬಂದಿದೆ. ಆನೆ ರೈಲ್ವೆ ಕಂಬಿ ದಾಟಿ ಹೊರಗೆ ಬರುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

SCROLL FOR NEXT