ರಾಜ್ಯ

ಚುನಾವಣೆಗೂ- ಕೃಷಿ ಕಾಯ್ದೆ ಹಿಂಪಡೆದಿದ್ದಕ್ಕೂ ಸಂಬಂಧವಿಲ್ಲ; ಪ್ರಧಾನಿ ಮೋದಿ ರೈತರ ಬೇಡಿಕೆಗೆ ಸ್ಪಂದಿಸಿದ್ದಾರೆ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವ ನಿರ್ಧಾರ ಪ್ರಕಟಿಸುವ ಮೂಲಕ ಪ್ರಧಾನಿ ರೈತರ ಒತ್ತಾಯಕ್ಕೆ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈತರ ಹೋರಾಟಕ್ಕೆ ಸರ್ಕಾರ ಮಣಿದಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಕೃಷಿ ಕಾನೂನನ್ನು ರೈತರ ಪರವಾಗಿ ಮಾಡಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿತ್ತು . ಅದಾಗಲಿಲ್ಲ. ಹೀಗಾಗಿ ಹೀಗಾಗಿ ಮೂರು ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಲಾಗಿದೆ.

ಐದು ರಾಜ್ಯಗಳ ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಹರ್ಯಾಣ, ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ಮೊನ್ನೆ ನಡೆದ ಉಪಚುನಾವಣೆಯಲ್ಲಿ ರೈತ ಚಳವಳಿ ನಡುವೆಯೂ ಬಿಜೆಪಿ ಅನೇಕ ಕಡೆ ಗೆದ್ದಿದೆ ಎಂದು ಸ್ಪಷ್ಟಪಡಿಸಿದರು. ಎಲ್ಲೋ ಒಂದು ಕಡೆ ಮತ್ತಷ್ಟು ಚರ್ಚೆಯಾಗಬೇಕು ಒಂದು ಸಾರಿ ಹಿಂತೆಗೆದುಕೊಂಡರೆ ವಿಶ್ವಾಸ ಬರಲಿದೆ ಎಂಬ ಕಾರಣದಿಂದ ನಿರ್ಧಾರ ಪ್ರಕಟಿಸಿರಬಹುದು ಎಂದರು .

ನಮ್ಮ ದೇಶದಲ್ಲಿ ಈ ಪ್ರಕ್ರಿಯೆ ಆರಂಭವಾಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ. 1991-21ರಲ್ಲಿ ಜಾಗತೀಕರಣ, ಉದಾರೀಕರಣದ ಅಂಗವಾಗಿ ಬಹಳಷ್ಟು ಹೊಸ ಕಾಯಿದೆಗಳನ್ನು ತರಬೇಕು ಎಂದಾಯಿತು. ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯೂಟಿಓ)ನಲ್ಲಿ ಅಂತರಾಷ್ಟ್ರೀಯ ಒಪ್ಪಂದವನ್ನು ಅಂದಿನ ಯುಪಿಎ ಸರ್ಕಾರ ಮಾಡಿತ್ತುಈ ಒಪ್ಪಂದದ ಅನ್ವಯ ಬಹಳಷ್ಟು ಸುಧಾರಣೆಗಳನ್ನು ಕೃಷಿ ಮತ್ತು ಕೃಷಿ ಮಾರುಕಟ್ಟೆಯಲ್ಲಿ ತರಬೇಕು ಎಂಬುದೂ ಅದರಲ್ಲಿ ಸೇರಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿದ್ದ ಕರಡನ್ನು ಬದಲಾವಣೆ ಮಾಡಿ ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದು ರೈತರಿಗೆ ಅನುಕೂಲ ಕಲ್ಪಿಸಲು ಕಾಯ್ದೆಗಳನ್ನು ಮಾಡಲಾಗಿತ್ತು ಎಂದು ಹೇಳಿದರು.

ಈಗಾಗಲೇ ವ್ಯಾಪಕವಾಗಿ ಅಕಾಲಿಕ ಮಳೆಯಾಗಿದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲೂ ಆಗಿದೆ.ವಿಶೇಷವಾಗಿ ತಮಿಳುನಾಡು, ಆಂಧ್ರ, ಮತ್ತು ಕರಾವಳಿ ಜಿಲ್ಲೆಗಳಲ್ಲಿ ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲೂ ಮಳೆಯಾಗಿದೆ. ಇಂದು ಪ್ರತಿ ಜಿಲ್ಲೆಯ ನಿಖರ ಮಾಹಿತಿ ಪಡೆಯುವುದಾಗಿ ಹೇಳಿದರು.

SCROLL FOR NEXT