ರಾಜ್ಯ

ಕೋವಿಡ್-19: ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಸರ್ಕಾರ ಮುಂದು!

Manjula VN

ದಾವಣಗೆರೆ: ಕೋವಿಡ್ -19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸಾವು ಹಾಗೂ ಸೋಂಕು ಇಳಿಕೆಯಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ಲಸಿಕೆ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತು ಐಸಿಎಂಆರ್ ಹಾಗೂ ತಜ್ಞರ ಜೊತೆಗೆ ಚರ್ಚೆಗಳ ನಡೆಸಲಾಗುತ್ತಿದ್ದು, ಸಲಹೆಗಳ ಬಳಿಕ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಐಸಿಎಂಆರ್'ಗೆ ಪತ್ರ ಬರೆಯಲಾಗಿದ್ದು, ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ತಿಳಿಸಲಾಗಿದೆ. ಎರಡನೇ ಡೋಸ್ ಲಸಿಕೆ ಪಡೆದು 6-8 ತಿಂಗಳು ಪೂರ್ಣಗೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಳ ಕುರಿತು ಮಾತನಾಡಿ, ಕಳೆದ 5 ತಿಂಗಳಿನಿಂದ ರಾಜ್ಯದಲ್ಲಿ ಶೇ.0.03 ಪಾಸಿಟಿವಿಟಿ ದರವಿದೆ. ರಾಜ್ಯದಲ್ಲಿ ಇನ್ನೂ ಕೆಲವೆಡೆ ಲಸಿಕೆ ಕುರಿತು ವಿರೋಧಗಳು ವ್ಯಕ್ತವಾಗಿವೆ. ಪರಿಣಾಮಕಾರಿ ಲಸಿಕೀಕರಣ ಮೂಲಕ ಇದನ್ನೂ ದೂರಾಗಿಸಲಾಗುತ್ತದೆ ಎಂದಿದ್ದಾರೆ.

"ಕೋವಿಡ್ ವೈರಸ್ ರೂಪಾಂತರಗಳ ಮೂಲಕ ಹರಡುತ್ತದೆ ಮತ್ತು ಹೊಸ ವೈರಸ್ ರೂಪಾಂತರಗಳು ನಮ್ಮಲ್ಲಿ ಲಭ್ಯವಿರುವ ಲಸಿಕೆಗಳಿಗೆ ನಿರೋಧಕವಾಗಿದೆಯೇ ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ." ಕೋವಿಡ್ -19 ಅನ್ನು ಜಯಿಸಲು ಇದು ಏಕೈಕ ಸುರಕ್ಷಿತ ಮಾರ್ಗವಾಗಿರುವುದರಿಂದ ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಮನವೊಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

SCROLL FOR NEXT