ಸಾಗರದಲ್ಲಿ ಭೀಕರ ಅಪಘಾತ 
ರಾಜ್ಯ

ಭೀಕರ ಅಪಘಾತ: ಬೈಕ್ ಗೆ ಢಿಕ್ಕಿ ತಪ್ಪಿಸಲು ಹೋಗಿ, ಇಬ್ಬರು ಹುಡುಗಿಯರಿಗೆ ಗುದ್ದಿದ ಗೂಡ್ಸ್ ಗಾಡಿ; ವಿಡಿಯೋ ವೈರಲ್

ಬೈಕ್ ಗೆ ಢಿಕ್ಕಿ ತಪ್ಪಿಸಲು ಹೋದ ಗೂಡ್ಸ್ ಗಾಡಿ ಚಾಲಕ ರಸ್ತೆ ಮೇಲೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿರುವ ಘಟನೆ ಶನಿವಾರ ನಡೆದಿದೆ.

ಶಿವಮೊಗ್ಗ: ಬೈಕ್ ಗೆ ಢಿಕ್ಕಿ ತಪ್ಪಿಸಲು ಹೋದ ಗೂಡ್ಸ್ ಗಾಡಿ ಚಾಲಕ ರಸ್ತೆ ಮೇಲೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿರುವ ಘಟನೆ ಶನಿವಾರ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿಎಚ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಬಿಎಚ್ ರಸ್ತೆಯಲ್ಲಿನ ಸುಜುಕಿ ಶೋರೂಂ ಬಳಿಯ ರಸ್ತೆಯಲ್ಲಿ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದ ರಸ್ತೆಯಿಂದ ವೇಗವಾಗಿ ಬಂದ ಗೂಡ್ಸ್ ಗಾಡಿ ಬೈಕ್ ಗೆ ಆಗಬಹುದಾಗಿದ್ದ ಸಂಭಾವ್ಯ ಢಿಕ್ಕಿ ತಪ್ಪಿಸಲು ನೇರವಾಗಿ ನುಗ್ಗಿದೆ. ಆದರೆ ಅಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಗೂಡ್ಸ್ ಗಾಡಿ ಹರಿದಿದ್ದು, ವಾಹನ ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿಯರು ಪಕ್ಕದ ಫುಟ್ ಪಾತ್ ಮೇಲೆ ಬಿದ್ದಿದ್ದಾರೆ. 

ಪ್ರಕರಣದಲ್ಲಿ ಓರ್ವ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೋರ್ವ ಯುವತಿ ಸ್ಥಿತಿ ಗಂಭೀರವಾಗಿದೆ. ಗಾಯಾಳು ವಿದ್ಯಾರ್ಥಿನಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 

ವಿಚಾರ ತಿಳಿದಕೂಡಲೇ ಸ್ಥಳಕ್ಕಾಗಮಿಸಿದ ಉಪ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಪರಿಶೀಲನೆ ನಡೆಸಿದರು. ಅಲ್ಲದೆ ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಹಠಾತ್ ನಿವೃತ್ತಿ ಘೋಷಿಸಿದ ಲಿಯೋನೆಲ್ ಮೆಸ್ಸಿ

ಇರಾನ್ ಸಂಘರ್ಷದ ನಡುವೆಯೂ ಭಾರತದ GDP ಶೇ.7.8ರಷ್ಟು ಬೆಳವಣಿಗೆ: ಪ್ರಧಾನಿ ಮೋದಿ ಮೆಚ್ಚುಗೆ!

'ಮೋದಿ ನನ್ನ ಜೀವನ ನರಕ ಮಾಡಿದ್ದಾರೆ, ಹೇಡಿ': ಕಣ್ಣೀರಿಟ್ಟು ಪ್ರಧಾನಿ ಕ್ಷಮೆ ಕೇಳಿದ್ದ ಹುಡುಗಿ ಯೂಟರ್ನ್; ಮತ್ತೊಂದು ವಿಡಿಯೋ!

ಕುಮಾರಸ್ವಾಮಿ ಟಾರ್ಗೆಟ್ BJP, ಕಾಂಗ್ರೆಸ್ ಅಲ್ಲ; ರಾಜ್ಯದಲ್ಲಿ ಕೇಸರಿ ಪಕ್ಷ ಇರಬಾರದೆಂದು ಹೋರಾಟ: CM ಡಿಕೆ ಶಿವಕುಮಾರ್

ಖರ್ಗೆ ವೇದಿಕೆ ಶುದ್ಧೀಕರಣ ಘಟನೆ: ರಾಹುಲ್ ಗಾಂಧಿ ವಿರುದ್ಧ FIR ಸಂವಿಧಾನದ ಮೇಲಿನ ದಾಳಿ- ಸಚಿವ ಪರಮೇಶ್ವರ್