ರಾಜ್ಯ

ಭಾರೀ ಮಳೆ: ಸತತ 11ನೇ ಬಾರಿ ಹಂಪಿ ಸ್ಮಾರಕ ನೀರಿನಲ್ಲಿ ಮುಳುಗಡೆ, ಪ್ರವಾಸಿಗರಿಗೆ ನಿರಾಶೆ

Sumana Upadhyaya

ಹಂಪಿ: ಕಳೆದ ಒಂದು ವರ್ಷದಲ್ಲಿ ಹಂಪಿಯ ಪುರಂದರ ಮಂಟಪ ತುಂಗಭದ್ರಾ ನದಿಯ ನೀರು ತುಂಬಿ ಹರಿದು ಸತತ 11ನೇ ಬಾರಿ ಮುಳುಗಡೆಯಾಗಿದೆ. 

ಈ ವರ್ಷ 2021 ರಲ್ಲಿ ಮಾನ್ಸೂನ್ ಪ್ರಾರಂಭವಾಗುವ ಮೊದಲು, ಭಾರತದ ಪುರಾತತ್ವ ಸಮೀಕ್ಷೆಯು ತುಂಗಭದ್ರಾ ನದಿಯ ದಡದಲ್ಲಿರುವ ಈ ನಿರ್ದಿಷ್ಟ ಸ್ಮಾರಕಕ್ಕೆ ಜಲನಿರೋಧಕವನ್ನು ಅಳವಡಿಸಿತ್ತು.. ಅಣೆಕಟ್ಟಿನಿಂದ ಮೇಲಕ್ಕೆ ಬಿಡುವ ನೀರಿನ ಹರಿವನ್ನು ತಡೆದುಕೊಳ್ಳಲು ಪಿಲ್ಲರ್‌ಗಳನ್ನು ಬಲಪಡಿಸಲಾಗಿತ್ತು.

ಇದೀಗ ಹಂಪಿ ಸ್ಮಾರಕ ಮುಳುಗಡೆಯಾಗಿರುವುದರಿಂದ ಹಾನಿಯುಂಟಾಗಿರಬಹುದು ಎಂದು ಹೇಳಲಾಗುತ್ತಿದ್ದು, ನೀರು ಕಡಿಮೆಯಾದಾಗ ಮಾತ್ರ ಹಾನಿಯ ಪ್ರಮಾಣ ತಿಳಿಯುತ್ತದೆ ಎಂದು ಹಂಪಿ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳುತ್ತಾರೆ.

600 ವರ್ಷಗಳ ಹಿಂದೆ ನಿರ್ಮಿಸಿರುವ ಪುರಂದರ ಮಂಟಪದ ಕಂಬವನ್ನು ಎಎಸ್‌ಐ ನಿಯಮಿತ ನಿರ್ವಹಣೆಗೆ ವಹಿಸುತ್ತದೆ. ಎಷ್ಟೋ ವರ್ಷಗಳಿಂದ ಕಂಬಗಳು ಗಟ್ಟಿಯಾಗಿ ನಿಂತಿವೆ. ಆದರೆ ಕಳೆದ ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಮಂಟಪ ಮೊದಲಿಗಿಂತ ಹೆಚ್ಚು ಮುಳುಗಡೆಯಾಗುತ್ತಿದೆ. ನೀರಿನ ಮಟ್ಟ ಕಡಿಮೆಯಾದ ನಂತರ, ಎಎಸ್‌ಐ ತಂಡವು ಪರಿಸ್ಥಿತಿಯನ್ನು ಪರಿಶೀಲಿಸಿ ದುರಸ್ತಿ ಕಾರ್ಯ ಅಗತ್ಯವಿದ್ದರೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಂಪಿ ಯುನೆಸ್ಕೋ ಪರಂಪರೆಯ ತಾಣವಾಗಿರುವುದರಿಂದ ಯಾವುದೇ ಸ್ಮಾರಕಗಳನ್ನು ಮರುಸ್ಥಾಪಿಸಲು ನಾವು ಸಿಮೆಂಟ್ ಸೇರಿದಂತೆ ಕೃತಕ ವಸ್ತುಗಳನ್ನು ಬಳಸುವುದಿಲ್ಲ. ಕಲ್ಲು ಮತ್ತು ಕಲ್ಲಿನ ಚಪ್ಪಡಿಗಳನ್ನು ಬಳಸಲಾಗುತ್ತದೆ. ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಹಂಪಿಯಲ್ಲಿ ಮೂರು ಕಟ್ಟಡಗಳು ಭಾಗಶಃ ಹಾನಿಗೊಳಗಾಗಿದ್ದವು. ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಇತರ ಸ್ಮಾರಕಗಳು ಶಿಥಿಲಗೊಂಡಿವೆ ಎನ್ನುತ್ತಾರೆ ಅಧಿಕಾರಿಗಳು.

ಹಂಪಿಗೆ ಬರುವ ಪ್ರವಾಸಿಗರು ಪುರಂದರ ಮಂಟಪದಲ್ಲಿ ಫೋಟೋಗಳನ್ನು ತೆಗೆಯುವುದು ಸಾಮಾನ್ಯ. ಹಂಪಿಯನ್ನು ಬೇರೆ ಅನೇಕ ಸ್ಮಾರಕಗಳಿದ್ದರೂ ಕೂಡ ಬಹುತೇಕ ಪ್ರವಾಸಿಗರು ಇಲ್ಲಿ ಫೋಟೋ ತೆಗೆದುಕೊಳ್ಳದೆ ಹಿಂತಿರುಗುವುದಿಲ್ಲ, ನೀರಿನ ಮಟ್ಟ ಸಹಜ ಮಟ್ಟಕ್ಕೆ ಬರಲು ಪ್ರವಾಸಿಗರು ಕೂಡ ಕಾಯುತ್ತಿದ್ದಾರೆ ಎಂದು ಟೂರಿಸ್ಟ್ ಗೈಡ್ ವೊಬ್ಬರು ಹೇಳುತ್ತಾರೆ.

SCROLL FOR NEXT