ಕಳವು ಮಾಲಿನ ಜೊತೆ ಆರೋಪಿ ವರದರಾಜು ಹಾಗು ರಾಜಾಜಿನಗರ ಪೊಲೀಸರು 
ರಾಜ್ಯ

ಬೆಂಗಳೂರು: ಅರ್ಧ ಕೆಜಿ ಚಿನ್ನ ಕದ್ದಿದ್ದ ಆರೋಪಿ 48 ಗಂಟೆಗಳಲ್ಲಿ ಬಂಧನ

ಸ್ಕ್ರೂ ಡ್ರೈವ್ ನಿಂದ ಡೋರ್ ಲಾಕ್ ಮುರಿದು ಚಿನ್ನ ಎಗರಿಸಿದ್ದ ಆರೋಪಿಯನ್ನು 48 ಗಂಟೆಗಳಲ್ಲಿ ಬಂಧಿಸುವಲ್ಲಿರಾಜಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು: ಸ್ಕ್ರೂ ಡ್ರೈವ್ ನಿಂದ ಡೋರ್ ಲಾಕ್ ಮುರಿದು ಚಿನ್ನ ಎಗರಿಸಿದ್ದ ಆರೋಪಿಯನ್ನು 48 ಗಂಟೆಗಳಲ್ಲಿ ಬಂಧಿಸುವಲ್ಲಿ ರಾಜಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ವರದರಾಜು ಎಂದು ಗುರುತಿಸಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ಬೀಗ ಹಾಕಿರುವ ಮನೆ ಹಾಗೂ ಕಚೇರಿಗಳನ್ನು ವರದರಾಜು ಟಾರ್ಗೆಟ್ ಮಾಡುತ್ತಿದ್ದನು. ಇದೇ ರೀತಿ ಟ್ರಾವೆಲ್ಸ್ ಕಚೇರಿಯಲ್ಲಿ ಮಾಲೀಕರೊಬ್ಬರು ಚಿನ್ನಾಭರಣ ಇಟ್ಟು ತೆರಳಿದ್ದರು. ಈ ವೇಳೆ ಸ್ಕ್ರೂ ಡ್ರೈವ್ ನಿಂದ ಡೋರ್ ಲಾಕ್ ಮುರಿದು ಆರೋಪಿ ವರದರಾಜು ಚಿನ್ನ ಕದ್ದಿದ್ದಾನೆ.

ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಆರೋಪಿ ವರದರಾಜುನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಅರ್ಧ ಕೆಜಿ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಈ ಹಿಂದೆ ನಂದಿನಿ ಲೇಔಟ್ ಪೊಲೀಸರಿಂದ ಆರೋಪಿ ಅರೆಸ್ಟ್ ಆಗಿದ್ದ ವಿಚಾರ ಸಹ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ