ರಾಜ್ಯ

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಜರ್ಮನಿಗೆ ಸಚಿವ ಮುರುಗೇಶ್ ನಿರಾಣಿ ಆಹ್ವಾನ!

Manjula VN

ಬೆಂಗಳೂರು: 2022ರ ನವೆಂಬರ್ ತಿಂಗಳ 2ರಿಂದ 4ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಲಾಗುತ್ತಿದ್ದು, ಕರ್ನಾಟಕದೊಂದಿಗೆ ಕೈಜೋಡಿಸುವಂತೆ ಜರ್ಮನಿಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಬುಧವಾರ ಆಹ್ವಾನ ನೀಡಿದ್ದಾರೆ.

ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಜಿಐಎಂ ಉತ್ತಮ ವೇದಿಕೆಯಾಗಿದೆ ಎಂದು ಸಚಿವ ನಿರಾಣಿಯವರು ಜರ್ಮನಿಯ ಕಾನ್ಸುಲ್ ಜನರಲ್ ಅಚಿಮ್ ಬುರ್ಕಾರ್ಟ್ ನೇತೃತ್ವದ ನಿಯೋಗಕ್ಕೆ ತಿಳಿಸಿದ್ದಾರೆ. 

ಕರ್ನಾಟಕ ಮತ್ತು ಜರ್ಮನಿ ಬಲವಾದ ಸಂಬಂಧವನ್ನು ಹೊಂದಿದ್ದು, ವಿಶೇಷವಾಗಿ ವ್ಯಾಪಾರ, ಎಫ್‌ಡಿಐ ಮತ್ತು ಹೂಡಿಕೆಗೆ ರಾಜ್ಯವು ಸೂಕ್ತ ತಾಣವಾಗಿದೆ. ಜರ್ಮನಿಯ ಸುಮಾರು 200 ಕಂಪನಿಗಳಿಗೆ ಕರ್ನಾಟಕ ತವರಾಗಿದೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

SCROLL FOR NEXT