ರಾಜ್ಯ

ಕೋವಿಡ್-19 ಲಸಿಕೆ: ಚೆನ್ನಯ್ಯನಕೋಟೆ ಆದಿವಾಸಿಗಳ ಮನವೊಲಿಸುವಲ್ಲಿ ಆರೋಗ್ಯ ಕಾರ್ಯಕರ್ತರು ಯಶಸ್ವಿ

Manjula VN

ಮಡಿಕೇರಿ: ಚೆನ್ನಯ್ಯನಕೋಟೆಯಲ್ಲಿ ನೆಲೆಯೂರಿರುವ ಆದಿವಾಸಿಗಳ ಸ್ಥಳಕ್ಕೆ ಪ್ರತೀನಿತ್ಯ ಭೇಟಿ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು, ಅವರ ಮನವೊಲಿಸಿ ಕೋವಿಡ್ ಲಸಿಕೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಪರಿಣಾಮ ಜಿಲ್ಲೆಯು ಈವರೆಗೂ ಶೇ.95ರಷ್ಟು ಗುರಿ ಸಾಧಿಸಿದಂತಾಗಿದೆ. 

ಕಳೆದ ಒಂದು ತಿಂಗಳ ಸತತ ಪ್ರಯತ್ನದಿಂದಾಗಿ ಶೇ.5ರಷ್ಟು ಆದಿವಾಸಿಗಳನ್ನು ಆರೋಗ್ಯ ಕಾರ್ಯಕರ್ತರು ಪತ್ತೆ ಹಚ್ಚಿದ್ದು, ಅವರಿಗೆ ಲಸಿಕೆ ನೀಡುವ ಕೆಲಸ ಮಾಡಿದ್ದಾರೆ. 

ಈ ನಡುವೆ ಆಶಾ ಕಾರ್ಯಕರ್ತೆಯೊಬ್ಬರು ಆದಿವಾಸಿ ಮಹಿಳೆಗೆ ಲಸಿಕೆ ಕುರಿತು ವಿವರಿಸಿದ್ದು, ಬಳಿಕ ಹಾಡಿಯಿಂದ ಹೊರ ಬಂದ ಆದಿವಾಸಿಗಳು ಲಸಿಕೆ ಪಡೆದುಕೊಂಡ ಬೆಳವಣಿಗೆ ಕಂಡು ಬಂದಿತು. 

ಮತ್ತೊಂದೆಡೆ ಪೊಲೀಸರು ಲಸಿಕೆ ಪಡೆದುಕೊಳ್ಳುವಂತೆ ವ್ಯಕ್ತಿಯೊಬ್ಬರಿಗೆ ತಿಳಿಸಿದ್ದು, ಇದಕ್ಕೆ ಹೆದರಿದ ವ್ಯಕ್ತಿ ಅರಣ್ಯದೊಳಗೆ ಹೋಗಿ ಬಚ್ಚಿಕೊಂಡ ಘಟನೆ ನಡೆಯಿತು. 

ಚೆನ್ನಯ್ಯನಕೋಟೆಯಲ್ಲಿ 4-5 ಬುಡಕಟ್ಟು ನೆಲೆಗಳಿವೆ. ನಿವಾಸಿಗಳ ಮನವೊಲಿಸಲು ಮತ್ತು ಅವರ ಮನಸ್ಸು ಗೆಲಲ್ಲಲು ನಾವು ಈ ನೆಲೆಗಳಿಗೆ ಐದು ಬಾರಿ ಭೇಟಿ ನೀಡಿದ್ದೇವೆ ಎಂದು ವೈದ್ಯಾಧಿಕಾರಿ ಡಾ.ಎಸ್. ಶಿವಪ್ಪ ಗೋಟ್ಯಾಲ್ ಅವರು ಹೇಳಿದ್ದಾರೆ. 

SCROLL FOR NEXT