ರಾಜ್ಯ

ಶಿರಸಿ-ಕುಮಟಾ ರಸ್ತೆ ಅಗಲೀಕರಣಕ್ಕೆ ಹೈಕೋರ್ಟ್ ಅಸ್ತು

Lingaraj Badiger

ಬೆಂಗಳೂರು: ಭಾರತ್ ಮಾಲಾ ಫೇಸ್-1 ಯೊಜನೆ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶರಸಿ - ಕುಮಟಾ ರಾಷ್ಟ್ರೀಯ ಹೆದ್ದಾರಿ-766ಇ ಅಗಲೀಕರಣ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಶನ್ ಮೂವ್‌ಮೆಂಟ್ ಚಾರಿಟಬಲ್ ಅಂಡ್ ವೆಲ್ಫೇರ್ ಟ್ರಸ್ಟ್ ಸಲ್ಲಿಸಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ರಸ್ತೆ ಹಾದುಹೋಗುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪರಿಸರ ಹಾನಿಯಾಗಲಿದೆ. ಹೀಗಾಗಿ ರಸ್ತೆ ಅಗಲೀಕರಣ ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

"ಯೋಜನೆಯ ಉದ್ದವು 100 ಕಿಮೀಗಿಂತ ಕಡಿಮೆ ಇದೆ ಮತ್ತು ಹೆಚ್ಚುವರಿ ಮಾರ್ಗದ ಹಾದಿ ಸಹ 40 ಮೀಟರ್‌ಗಿಂತ ಕಡಿಮೆ ಇದೆ. ಈ ಅಗಲೀಕರಣವೂ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವುದರಿಂದ, ಪ್ರಕರಣದ ವಿಲಕ್ಷಣ ಸಂಗತಿಗಳು ಮತ್ತು ಸನ್ನಿವೇಶಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ”ಎಂದು ಕೋರ್ಟ್ ಹೇಳಿದೆ.

ಈ ರಸ್ತೆಯಲ್ಲಿ ಅತ್ಯಂತ ವಿರಳ ವಾಹನ ಸಂಚಾರವಿದ್ದು ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡಿನ ನಡುವೆ ಈ ರಸ್ತೆ ಹಾದು ಹೋಗುತ್ತಿದೆ. ಪರಿಸರದ ಮೇಲಿನ ವ್ಯತಿರಿಕ್ತ ಪರಿಣಾಮವನ್ನು ಪರಿಗಣಿಸದೇ ಅವೈಜ್ಞಾನಿಕ ರೀತಿಯಲ್ಲಿ ಈ ರಸ್ತೆಯನ್ನು ಅಗಲಿಕರಣ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

SCROLL FOR NEXT