ರಾಜ್ಯ

ತಜ್ಞರ ಜೊತೆ ಸಮಾಲೋಚಿಸಿ ಶೀಘ್ರವೇ ಕೋವಿಡ್ ನಿಯಮ ಸರಳೀಕರಣ, ಪ್ರಾಥಮಿಕ ಶಾಲಾರಂಭ ಕುರಿತು ನಿರ್ಧಾರ: ಸಿಎಂ ಬೊಮ್ಮಾಯಿ

Shilpa D

ಮೈಸೂರು: ಕೋವಿಡ್‌ ಸೋಂಕು ನಿಯಂತ್ರಣದಲ್ಲಿ ಇರುವುದರಿಂದ ಶೀಘ್ರದಲ್ಲಿಯೇ ಕೋವಿಡ್‌ ನಿಯಮಗಳನ್ನು ಸರಳಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಮೈಸೂರಿನಲ್ಲಿ ಮಾತನಾಡಿದ ಅವರು ಎರಡು ದಿನಗಳಲ್ಲಿ ತಜ್ಞ ರ ಜೊತೆ ಚರ್ಚೆ ನಡೆಸಲಾಗುವುದು. ಗಡಿ ಜಿಲ್ಲೆಗಳಲ್ಲಿ ಕೂಡ ಕೊರೊನಾ ಪ್ರಮಾಣ ಕಡಿಮೆಯಾಗಿದೆ. ಪ್ರಾಥಮಿಕ ಶಾಲಾರಂಭ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚಿಂತನೆ ಮಾಡಿ ಸರಳೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಲ್ಲರ ಅನುಮೋದನೆ ಪಡೆದ ನಂತರ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ ಮತ್ತು ಸೋಂಕಿನ ಪ್ರಮಾಣವು ಶೇಕಡ ಒಂದಕ್ಕಿತ ಕಡಿಮೆಯಿದೆ ಎಂದು  ಬೊಮ್ಮಾಯಿ ಹೇಳಿದರು, ಪ್ರಕರಣಗಳು ಕಡಿಮೆಯಾಗಿದ್ದರೂ ಕೂಡ ಸಿಬ್ಬಂದಿಯನ್ನು ಕೆಳಗಿಳಿಸದಂತೆ ತಜ್ಞರು ಎಚ್ಚರಿಸಿದ್ದಾರೆ.

ಆರೋಗ್ಯ ಇಲಾಖೆಯ ಪ್ರಕಾರ, ಶುಕ್ರವಾರದ ಪಾಸಿಟಿವಿಟಿ ದರವು ಶೇಕಡಾ 0.5 ರಷ್ಟಿತ್ತು. ಕಾರ್ಮಿಕ ಕಾರ್ಡ್ ದುರುಪಯೋಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಕೇಂದ್ರವು ಇ-ಶ್ರಮ ಎಂಬ ಪೋರ್ಟಲ್ ಅನ್ನು ರಚಿಸಿದೆ, ಇದರಿಂದ ನಿಜವಾದ ಫಲಾನುಭವಿಗಳು ಲಾಭವನ್ನು ಪಡೆಯಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಅಂತಹ ನಿದರ್ಶನಗಳಿದ್ದರೆ, ನಾವು ಈ ವಿಷಯವನ್ನು ತನಿಖೆಗೊಳಪಡಿಸುತ್ತೇವೆ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುತ್ತೇವೆ ಎಂದು ಅವರು ಹೇಳಿದರು.

SCROLL FOR NEXT