ರಾಜ್ಯ

2 ವರ್ಷಗಳ ಬಳಿಕ ಮತ್ತೆ ಹಂಪಿಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಸಿದ್ಧತೆ: ದಕ್ಷಿಣ, ಬಾಲಿವುಡ್ ಸಿನಿ ತಂಡಗಳ ಸಾಲು!

Srinivas Rao BV

ಹಂಪಿ: ಕೋವಿಡ್-19 ಸಾಂಕ್ರಾಮಿಕದ ನಂತರ 2 ವರ್ಷಗಳ ಬಳಿಕ ಸಿನಿಮಾ ಚಿತ್ರೀಕರಣ ಪುನಾರಂಭಕ್ಕೆ ಹಂಪಿ ಸಜ್ಜುಗೊಂಡಿದೆ. 

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾರಂಪರಿಕ ತಾಣವಾಗಿರುವ ಹಂಪಿ ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ನೆಚ್ಚಿನ ಚಿತ್ರೀಕರಣದ ಪ್ರದೇಶವಾಗಿದೆ.

ಹಂಪಿಯಲ್ಲಿ ಚಿತ್ರೀಕರಣ ನಡೆಸಲು 35 ಕ್ಕೂ ಹೆಚ್ಚು ಸಿನಿಮಾ ಯುನಿಟ್ ಗಳು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ.

ಹಂಪಿ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ಕೋವಿಡ್-19 ಲಾಕ್ ಡೌನ್ ನಿಂದಾಗಿ ಹಂಪಿಯಲ್ಲಿ ಚಿತ್ರೀಕರಣ ನಡೆಸುವುದಕ್ಕಾಗಿ ಅನುಮತಿಯನ್ನು ಸ್ಥಗಿತಗೊಳಿಸಲಾಗಿತ್ತು. ಹಂಪಿಯ ನೈಸರ್ಗಿಕ ಸೌಂದರ್ಯ ಹಾಗೂ ವಾಸ್ತುಶಿಲ್ಪದ ಅದ್ಭುತಗಳಿಗಾಗಿ ಚಿತ್ರೀಕರಣಕ್ಕೆ ಆದ್ಯತೆ, ಆಕರ್ಷಣೆಯ ಪ್ರದೇಶವಾಗಿದೆ. ಹೆಲಿ ಟೂರಿಸಂ ಶೀಘ್ರವೇ ಪ್ರಾರಂಭವಾಗುವುದರಿಂದ ಸಿನಿಮಾ ಕ್ಷೇತ್ರವನ್ನು ಹಂಪಿ ಕೈಬೀಸಿ ಕರೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ದಕ್ಷಿಣ ಭಾರತೀಯ ಸಿನಿಮಾರಂಗದ ಹೊರತಾಗಿ ಮುಂಬೈ ಫಿಲಮ್ ಇಂಡಸ್ಟ್ರಿಯಿಂದ ಎರಡು ಅನುಮತಿ ಕೇಳಿ ಅರ್ಜಿ ಸಲ್ಲಿಸಲಾಗಿದೆ. ಸಿನಿಮಾ ಚಿತ್ರೀಕರಣ ಮಾಡುವವರು ನಿಯಮಗಳಿಗೆ ಬದ್ಧರಾಗಿರಬೇಕಾಗುತ್ತದೆ. ಯಾವುದೇ ಹಾನಿ ಮಾಡಬಾರದೆಂಬ ನಿಯಮ ವಿಧಿಸಲಾಗಿದೆ. ಚಿತ್ರೀಕರಣದ ಪ್ರದೇಶಗಳಿಗೆ ಅನುಗುಣವಾಗಿ ಡೆಪಾಸಿಟ್ ಹಣದ ಜೊತೆಗೆ ದಿನವೊಂದಕ್ಕೆ ಚಿತ್ರೀಕರಣ ನಡೆಸಲು 1 ಲಕ್ಷ ರೂಪಾಯಿಗಳ ಶುಲ್ಕ ಪಡೆಯಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. 

SCROLL FOR NEXT