ರಾಜ್ಯ

ಒಂದು ವಾರದೊಳಗೆ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಪೊಲೀಸ್ ಆಯುಕ್ತರಿಗೆ ಸೂಚನೆ: ಸಿಎಂ ಬೊಮ್ಮಾಯಿ 

Sumana Upadhyaya

ಬೆಂಗಳೂರು: ನಗರದಲ್ಲಿ ಹೊಂಡ ಬಿದ್ದಿರುವ ರಸ್ತೆಗಳ ದುರಸ್ತಿಗೆ ಒಂದು ವಾರ ಕಾಲಾವಕಾಶವನ್ನು ನೀಡಲಾಗಿದ್ದು, ಅಷ್ಟರೊಳಗೆ ದುರಸ್ತಿ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದ ಬಹುತೇಕ ರಸ್ತೆಗಳಲ್ಲಿ ಹೊಂಡಗುಂಡಿ ಬಿದ್ದಿದ್ದು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ, ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ, ತ್ಯಾಜ್ಯ ನಿರ್ವಹಣೆ ವಿಲೇವಾರಿ ಕಾಲಕಾಲಕ್ಕೆ ಸೂಕ್ತವಾಗಿ ನಡೆಯುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಿದ್ದು ಈ ಬಗ್ಗೆ ಪ್ರತಿಭನೆಗೂ ಮುಂದಾಗಿದ್ದಾರೆ ಎಂದು ಸುದ್ದಿಗಾರರು ಸಿಎಂ ಬೊಮ್ಮಾಯಿ ಗಮನಕ್ಕೆ ತಂದರು.

ಆಗ ಸಿಎಂ ಬೊಮ್ಮಾಯಿ, ನನಗೆ ಬೆಂಗಳೂರು ಪೊಲೀಸ್ ಆಯುಕ್ತರಿಂದ ವರದಿ ಬಂದಿದ್ದು, ಈ ಬಗ್ಗೆ ಇಂದು ಸಭೆ ನಡೆಸಲಿದ್ದೇನೆ, ಈ ಹಿಂದಿನ ದಿನಗಳಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಹೊಂಡ-ಗುಂಡಿಗಳು ಹೆಚ್ಚಾಗಿದ್ದು ಅದರ ದುರಸ್ತಿ ಮಾಡಲು ಅಡಚಣೆಯಾಗಿತ್ತು. ಬೆಂಗಳೂರು ಪೊಲೀಸ್ ಆಯುಕ್ತರಿಗೆ ಒಂದು ವಾರಗಳ ಕಾಲಾವಕಾಶ ನೀಡಲಾಗುತ್ತಿದ್ದು ಅಷ್ಟರೊಳಗೆ ಗುಂಡಿಗಳನ್ನು ಮುಚ್ಚಬೇಕು ಎಂದರು.

ಒಂದು ವಾರದ ಬಳಿಕ ಕಾಮಗಾರಿ ಸರಿಯಾಗದಿದ್ದರೆ ನಾಗರಿಕರ ಬಳಿ ನಾನೇ ಸ್ವತಃ ತೆರಳಿ ಅವರ ಕಷ್ಟಗಳನ್ನು, ದೂರುಗಳನ್ನು ಆಲಿಸುತ್ತೇನೆ ಎಂದರು.

SCROLL FOR NEXT