ರಾಜ್ಯ

ರೊಹಿಂಗ್ಯಾ ವಲಸಿಗರ ಗಡಿಪಾರು: ಸುಪ್ರೀಂ ಕೋರ್ಟ್ ನಲ್ಲಿ ಪರಿಷ್ಕೃತ ಅಫಿಡವಿಟ್ಟು ಸಲ್ಲಿಸಿದ ರಾಜ್ಯ ಸರ್ಕಾರ 

Sumana Upadhyaya

ಬೆಂಗಳೂರು: ರೊಹಿಂಗ್ಯಾ ವಲಸಿಗರ ಗಡಿಪಾರಿನ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದಿದೆ. ರೊಹಿಂಗ್ಯಾ ವಲಸಿಗರ ಗಡಿಪಾರಿಗೆ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿರುವ ರೊಹಿಂಗ್ಯಾಗಳನ್ನು ಗಡಿಪಾರು ಮಾಡುವ ಯಾವುದೇ ಯೋಜನೆ ಇಲ್ಲ ಎಂಬ ತನ್ನ ಹಿಂದಿನ ನಿಲುವಿನಿಂದ ಸರ್ಕಾರ ಹಿಂದೆ ಸರಿದಿದೆ. ಈ ಕುರಿತು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪರಿಷ್ಕೃತ ಅಫಿಡವಿಟ್ಟು ಸಲ್ಲಿಸಿದೆ. 

ಬಾಂಗ್ಲಾದೇಶ ಹಾಗೂ ರೊಹಿಂಗ್ಯಾ ಮುಸ್ಲಿಮರು ಸೇರಿದಂತೆ ಅಕ್ರಮ ವಲಸಿಗರು ಹಾಗೂ ಒಳನುಸುಳುಕೋರರನ್ನು ಬಂಧಿಸಬೇಕು ಹಾಗೂ ಗಡಿಪಾರು ಮಾಡಬೇಕು ಎಂದು ಕೋರಿ ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕರ್ನಾಟಕ ಬಿಜೆಪಿ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸುವಂತೆ ಅದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು.

ಆದರೆ ಇದೀಗ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದಿದೆ. ರೊಹಿಂಗ್ಯಾ ವಲಸಿಗರನ್ನು ಯಾವುದೇ ಶಿಬಿರಗಳಲ್ಲಿ ಅಥವಾ ನಿರಾಶ್ರಿತ ಕೇಂದ್ರಗಳಲ್ಲಿ ಇರಿಸಿಲ್ಲ. 126 ರೋಹಿಂಗ್ಯಾ ವಲಸಿಗರನ್ನು ರಾಜ್ಯದಲ್ಲಿ ಗುರುತಿಸಲಾಗಿದೆ ಎಂದು ರಾಜ್ಯ ಗೃಹ ಇಲಾಖೆ ತನ್ನ ಹೊಸ ಅಫಿಡವಿಟ್ಟಿನಲ್ಲಿ ತಿಳಿಸಿದೆ.

SCROLL FOR NEXT