ರಾಜ್ಯ

ಪ್ರಸಾದ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ತಾತ್ವಿಕ ಅನುಮೋದನೆ

Nagaraja AB

ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟವನ್ನು ಪ್ರಸಾದ ಯೋಜನೆ ವ್ಯಾಪ್ತಿಯಲ್ಲಿ ಸೇರಿಸುವಲ್ಲಿ ಅಗತ್ಯ ವಿವರ ಒದಗಿಸುವಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಲೋಪ ಕಂಡುಬಂದ ಮಾರನೇ ದಿನವೇ  ಪ್ರವಾಸೋದ್ಯಮ ಸಚಿವಾಲಯ ಈ ಪ್ರಸ್ತಾವಕ್ಕೆ ತಾತ್ವಿಕ ಅನುಮೋದನೆ ನೀಡಿದೆ.

ಶುಕ್ರವಾರ ಮುಕ್ತಾಯವಾದ ದಕ್ಷಿಣ ವಲಯಗಳ ಪ್ರವಾಸೋದ್ಯಮ ಮತ್ತು ಸಂಸ್ಕೃತಿ  ಸಚಿವರ ಎರಡು ದಿನಗಳ  ಸಮಾವೇಶದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಅಗತ್ಯ ವಿವರಗಳನ್ನು ಕೇಂದ್ರ ಪ್ರವಾಸೋದ್ಯಕ್ಕೆ ಸಲ್ಲಿಸಿದ್ದು, ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿದ್ದಾರೆ.

ಅಂತಿಮ ಗ್ರೀನ್ ಸಿಗ್ನಿಲ್ ನೀಡುವ ಮುನ್ನ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ನಿಯೋಗವೊಂದು ಸ್ಥಳಕ್ಕೆ ಭೇಟಿ ನೀಡಲು ಒಪ್ಪಿಕೊಂಡಿದೆ.  ಅವರು ಬಯಸಿದಂತೆ ಬದಲಾವಣೆ ಮಾಡಲು ವಿವರಣೆ ನೀಡಲಾಯಿತು. ಈ ಧಾರ್ಮಿಕ ಕ್ಷೇತ್ರದ ಭಿನ್ನತೆ, ಮೌಲ್ಯತೆ, ಇದರಿಂದ ಕೇಂದ್ರ ಪ್ರವಾಸೋದ್ಯ ಇಲಾಖೆಗೆ ಏನು ಪಡೆಯಬಹುದು ಮತ್ತಿತರ ಕೆಲವೊಂದು ಬದಲಾವಣೆ ಮಾಡಲು ಸಚಿವಾಲಯ ಬಯಸಿತ್ತು. ಅವರ ಸಲಹೆ ಮೇರೆಗೆ 'ಪ್ರಕಾರ' (ದೇವಾಲಯ ಸುತ್ತ ಆವರಣ) ಪ್ರಸ್ತಾವವನ್ನು ಸೇರಿಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯ ಇಲಾಖೆ ನಿರ್ದೇಶಕರಾದ ಸಿಂಧು ಪಿ ರೂಪೇಶ್ ತಿಳಿಸಿದರು. 

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ನಂದಿ ಪ್ರತಿಮೆಯನ್ನು ಸುಂದರಗೊಳಿಸಲು ಅವರು ಸಲಹೆ ನೀಡಿದ್ದಾಗಿ ಸಿಂಧು ಪಿ. ರೂಪೇಶ್ ತಿಳಿಸಿದರು. 

SCROLL FOR NEXT