ರಾಜ್ಯ

ರೈಲುಗಳತ್ತ ಕಲ್ಲುತೂರಾಟ ಮಾಡುವುದನ್ನು ಇನ್ನು ಮುಂದೆ ಸಾರ್ವಜನಿಕರು ಇಲಾಖೆಗೆ ವರದಿ ಮಾಡಬಹುದು: ಹೇಗೆ ಅಂದರೆ...

Srinivas Rao BV

ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗದಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ಮಾಡುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಹೆಬ್ಬಾಳ-ಬಾನಸವಾಡಿ, ಲೊಟ್ಟೆಗೊಲ್ಲಹಳ್ಳಿ-ಹೆಬ್ಬಾಳ ಹಾಗೂ ಚನ್ನಸಂದ್ರ-ತುಮಕೂರು ಠಾಣೆಗಳನ್ನು ಟಾರ್ಗೆಟ್ ಮಾಡಿ ಕಲ್ಲುತೂರಾಟ ನಡೆಸಲಾಗುತ್ತಿದೆ. 

ಭುವನೇಶ್ವರ್-ಕೆಎಸ್ ಆರ್ ಬೆಂಗಳೂರು ವಿಶೇಷ ರೈಲು 92 ನಿಮಿಷಗಳಷ್ಟು ವಿಳಂಬವಾಯಿತೆಂಬ ಕಾರಣಕ್ಕೆ ಅ.21 ರಂದು ಇದೇ ರೀತಿಯಲ್ಲಿ ಹಾನಿಗೊಳಪಡಿಸಲಾಗಿದ್ದು, ಈ ವಿಷಯವನ್ನು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ನೇತೃತ್ವದಲ್ಲಿ ನಡೆದ ವಾರದ ಸುರಕ್ಷತಾ ಸಭೆಯಲ್ಲಿ ಚರ್ಚಿಸಲಾಗಿದೆ. 

ಸಭೆಯ ಬಳಿಕ ಮಾತನಾಡಿರುವ ಕಿಶೋರ್, ಇಂತಹ ಘಟನೆಗಳನ್ನು ಸಾರ್ವಜನಿಕರು ವರದಿ ಮಾಡಬಹುದಾಗಿದೆ ಎಂದು ಹೇಳಿದ್ದಾರೆ. ರೈಲ್ವೆ ಇಲಾಖೆಯ ಆಸ್ತಿ ಸಾರ್ವಜನಿಕ ಆಸ್ತಿಯಾಗಿದ್ದು, ಇಲಾಖೆಯ ಆಸ್ತಿ ಹಾನಿ ರಾಷ್ಟ್ರೀಯ ನಷ್ಟವಾಗುತ್ತದೆ. 

ರೈಲುಗಳಿಗೆ ಕಲ್ಲು ತೂರಾಟ ಮಾಡುವುದನ್ನು ವರದಿ ಮಾಡುವುದಕ್ಕೆ ಸಾರ್ವಜನಿಕರು 139 ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಬಹುದಾಗಿದೆ ಎಂದು ಕಿಶೋರ್ ಹೇಳಿದ್ದಾರೆ. ಕಲ್ಲು ತೂರಾಟ ಮಾಡುವುದರಿಂದ ಆಸ್ತಿ ಹಾನಿಯಾವುದು, ಭದ್ರತಾ ವಿಷಯಗಳಷ್ಟೇ ಅಲ್ಲದೇ ಮಾರಣಾಂತಿಕವೂ ಆಗಿದೆ. ಭುವನೇಶ್ವರ್ ರೈಲಿಗೆ ಕಲ್ಲು ತೂರಾಟ ಮಾಡಿದ್ದ ವ್ಯಕ್ತಿಯನ್ನು ರೈಲ್ವೆ ಕಾಯ್ದೆಯ ಸೆಕ್ಷನ್ 147 & 154 ಅಡಿಯಲ್ಲಿ ಬಂಧಿಸಲಾಗಿದೆ.

SCROLL FOR NEXT