ನಟ ಚೇತನ್ ಕುಮಾರ್ 
ರಾಜ್ಯ

ರಾಜಕಾರಣಿಗಳು ಕನಕದಾಸರನ್ನು ಹೈಜಾಕ್ ಮಾಡಲು ಬಿಡಬಾರದು: ಚೇತನ್ ಟ್ವಿಟ್ ನ ಮರ್ಮವೇನು?

ಕೆಲ ದಿನಗಳ ಹಿಂದಷ್ಟೇ  ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 'ಜಾತಿ ನಾಯಕ' ಎಂದು ಟ್ವೀಟ್ ಮಾಡಿದ್ದ ನಟ ಚೇತನ್ ಇಂದು, ಅಧಿಕಾರಕ್ಕಾಗಿ ಜಾತಿ ಗುರುತನ್ನು ಬಳಸಿಕೊಳ್ಳುವ ಸ್ವ- ಸೇವಕ ರಾಜಕಾರಣಿಗಳು ಕನಕದಾಸರನ್ನು ಹೈ ಜಾಕ್ ಮಾಡಲು ಬಿಡಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ  ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 'ಜಾತಿ ನಾಯಕ' ಎಂದು ಟ್ವೀಟ್ ಮಾಡಿದ್ದ ನಟ ಚೇತನ್ ಇಂದು, ಅಧಿಕಾರಕ್ಕಾಗಿ ಜಾತಿ ಗುರುತನ್ನು ಬಳಸಿಕೊಳ್ಳುವ ಸ್ವ- ಸೇವಕ ರಾಜಕಾರಣಿಗಳು ಕನಕದಾಸರನ್ನು ಹೈ ಜಾಕ್ ಮಾಡಲು ಬಿಡಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಕನದಾಸರು 16 ನೇ ಶತಮಾನದಲ್ಲಿ ಜಾತಿ ರಹಿತ ಮತ್ತು ವರ್ಗ ರಹಿತ ಸಮಾಜದ ಕನಸನ್ನು ಕಂಡಿದ್ದರು. ಸಮಾನತೆ ಮತ್ತು ನ್ಯಾಯಕ್ಕಾಗಿ ಹೋರಾಡಿದ್ದ ಕನಕದಾಸರು, ಜಾತಿ, ಧರ್ಮ, ಲಿಂಗವನ್ನು ಮೀರಿದ್ದ ನಮೆಲ್ಲರಿಗೂ ಸೇರಿದವರಾಗಿದ್ದಾರೆ ಎಂದು ಚೇತನ್ ಹೇಳಿದ್ದಾರೆ. ಚೇತನ್ ಮಾಡಿರುವ ಈ ಟ್ವಿಟ್ ಮರ್ಮವೇನು ಎಂಬುದು ಗೊತ್ತಾಗಿಲ್ಲ.

ಕಳೆದ ಶನಿವಾರ ಟ್ವೀಟ್ ಮಾಡಿದ್ದ ಚೇತನ್, ಸಿದ್ದರಾಮಯ್ಯ ಕರ್ನಾಟಕ ಮತ್ತು ಕಾಂಗ್ರೆಸ್ ನ ಪ್ರಬಲ ನಾಯಕ. ಆದರೆ. ಬ್ರಾಹ್ಮಣ್ಯವನ್ನು ಆಳವಾಗಿ ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ ಎಂದಿದ್ದರು.

ನಿಜವಾದ ಬದಲಾವಣೆಗೆ ಕರ್ನಾಟಕ ಮತ್ತು ಭಾರತಕ್ಕೆ ಜಾತಿ ವಿರೋಧಿ ನಾಯಕತ್ವ ಬೇಕಾಗಿದೆ. ಸಿದ್ದರಾಮಯ್ಯ ಅವರ ಸೇವೆ ಹುಟ್ಟಿದ ಜಾತಿಗೆ ಮಾತ್ರ ಸೀಮಿತವಾಗಿದ್ದು, ಇತರೆ ಬಹುಜನರಿಂದ ಸಿಗುವ ಮತಗಳಿಗಾಗಿ ಮಾತ್ರ ಬಣ್ಣದ ಮಾತಾಡುತ್ತಾರೆ ಎಂದು ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT