ರಾಜ್ಯ

ಕೆಂಪೇಗೌಡ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಸದ್ಯಕ್ಕೆ ಏರಿಕೆ ಇಲ್ಲ

Srinivas Rao BV

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಸದ್ಯಕ್ಕೆ ಏರಿಕೆ ಇಲ್ಲ ಎಂದು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಕ ಪ್ರಾಧಿಕಾರ (ಎಇಆರ್ ಎ) ತನ್ನ ಆದೇಶದಲ್ಲಿ ತಿಳಿಸಿದೆ. 

ಮುಂದಿನ ವರ್ಷದ ಮಾರ್ಚ್ ವರೆಗೂ ಬಳಕೆದಾರರ ಶುಲ್ಕವನ್ನು ಯಥಾ ಸ್ಥಿತಿ ಕಾಯ್ದುಕೊಳ್ಳಲು ಎಇಆರ್ ಎ ಹೇಳಿದೆ. ಆದರೆ 2022 ರ ಏಪ್ರಿಲ್ 1 ರಿಂದ ಹೆಚ್ಚಿನ ಪ್ರಮಾಣದಲ್ಲಿ ವಿಮಾನ ನಿಲ್ದಾಣದ ಶುಲ್ಕ ಹೆಚ್ಚಿಸಲು ಅನುಮತಿ ನೀಡಿದೆ.

ಈಗ ದೇಶೀಯ, ಹೊರ ತೆರಳುವ ವಿಮಾನಗಳಿಗೆ ಏರ್ ಪೋರ್ಟ್ ಬಳಕೆದಾರರ ಶುಲ್ಕ 184 ರೂಪಾಯಿಗಳಾಗಿದ್ದು, ಹೊರ ಹೋಗುವ ಅಂತಾರಾಷ್ಟ್ರೀಯ ವಿಮಾನಗಳಿಗೆ 839 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದು 2021-2026 ರ ನಡುವಿನ ಮೂರನೇ ನಂತ್ರಣ ಅವಧಿ ಪ್ರಾರಂಭವಾದ ನಂತರವೂ ಅಕ್ಟೋಬರ್ 1 ವರೆಗೆ ಈ ದರವೇ ಮುಂದುವರೆಯಲಿದೆ.

ಮುಂದಿನ ಆರ್ಥಿಕ ವರ್ಷದಿಂದ ಈ ಶುಲ್ಕದ ದರ ದೇಶೀಯ, ಹೊರಹೋಗುವ ವಿಮಾನಗಳಿಗೆ 350 ರೂಪಾಯಿ, ಹೊರಹೋಗುವ ಅಂತಾರಾಷ್ಟ್ರೀಯ ವಿಮಾನಗಳಿಗೆ 1,200 ರೂಪಾಯಿಗಳನ್ನು ನಿಗದಿಪಡಿಸಗುತ್ತದೆ. ಹೊಸ ಶುಲ್ಕ ದರ ಮಾರ್ಚ್ 2023 ಕ್ಕೆ ಜಾರಿಯಲ್ಲಿರಲಿದೆ.

ಜುಲೈ ನ ಮೊದಲ ವಾರದಲ್ಲಿ ಎಇಆರ್ ಎ ಅ.1 ರಿಂದ ಶುಲ್ಕ ಹೆಚ್ಚುಗೊಳಿಸುವುದನ್ನು ಪ್ರಸ್ತಾವಿಸಿತ್ತು. ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಶುಲ್ಕ ಏರಿಕೆಯಲ್ಲಿ ವಿಳಂಬ ಉಂಟಾಗಿದೆ.

ಅಕ್ಟೊಬರ್ 2021 ರಿಂದ 2023 ರ ಮಾರ್ಚ್ ವರೆಗೂ ಯುಡಿಎಫ್ ಶುಲ್ಕವನ್ನು 450 ರೂಪಾಯಿಗಳಿಗೆ ಏರಿಕೆ ಮಾಡುವುದು, 2023 ರ ಏಪ್ರಿಲ್ ನಿಂದ 2024 ರ ಮಾರ್ಚ್ ವರೆಗೆ 550 ರೂಪಾಯಿ 2024 ರ ಏಪ್ರಿಲ್ ನಿಂದ 2026 ರ ಮಾರ್ಚ್ ವರೆಗೂ 555 ರೂಪಾಯಿಗಳಿಗೆ ದೇಶೀಯ ಪ್ರಯಾಣಿಕ ವಿಮಾನಗಳಿಗೆ ಶುಲ್ಕ ಹೆಚ್ಚಿಸುವ ಪ್ರಸ್ತಾವನೆಯನ್ನು ಮುಂದಿಡಲಾಗಿತ್ತು. ಬಿಐಎಎಲ್ ನ ಏರ್ ಪೋರ್ಟ್ ಆಪರೇಟರ್ ಎಇಆರ್ ಎ ಯ ಶುಲ್ಕ ನಿರ್ಧಾರಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

SCROLL FOR NEXT