ಸಾಂದರ್ಭಿಕ ಚಿತ್ರ 
ರಾಜ್ಯ

ಜಾತ್ರೆಗೆ ಹೊರಟವರ ಕ್ರೂಸರ್​ಗೆ ಬಸ್​ ಡಿಕ್ಕಿ: ಬಾಲಕ ಸಾವು, ಐವರಿಗೆ ಗಾಯ

ಮನೆದೇವರ ಜಾತ್ರೆಗೆ ಹೊರಟಿದ್ದವರ ಕ್ರೂಸರ್ ವಾಹನಕ್ಕೆ ಖಾಸಗಿ ಬಸ್​​ ವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಜಂಗಮರ ಕಲ್ಗುಡಿ ಬಳಿ ಬುಧವಾರ ಬೆಳಗಿನಜಾವ ಸಂಭವಿಸಿದೆ.

ಗಂಗಾವತಿ: ಮನೆದೇವರ ಜಾತ್ರೆಗೆ ಹೊರಟಿದ್ದವರ ಕ್ರೂಸರ್ ವಾಹನಕ್ಕೆ ಖಾಸಗಿ ಬಸ್​​ ವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಜಂಗಮರ ಕಲ್ಗುಡಿ ಬಳಿ ಬುಧವಾರ ಬೆಳಗಿನಜಾವ ಸಂಭವಿಸಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೆರಾದ 9 ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬೆಂಗಳೂರಿನಿಂದ ಲಿಂಗಸುಗೂರಿನ ಹಟ್ಟಿಗೆ ಹೊರಟಿದ್ದ ಬಸ್​, ಜವಳಗೆರಾದಿಂದ ಹರಿಹರಕ್ಕೆ ಹೊರಟಿದ್ದ ಕ್ರೂಸರ್ ಮಧ್ಯೆ ಅಪಘಾತ ಸಂಭವಿಸಿದೆ.

ಪರಿಣಾಮ ಕ್ರೂಸರ್ ನಲ್ಲಿದ್ದ ಓರ್ವ ಬಾಲಕ ಮೃತಪಟ್ಟಿದ್ದು, 5ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ 112 ಗಸ್ತು ವಾಹನದ ಮೂಲಕ ಪೊಲೀಸರು ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್​​ ಚಾಲಕನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!