ರಾಜ್ಯ

ಅಗಲಿದ ಗಣ್ಯರಿಗೆ ಸಂತಾಪ, ಕಲಾಪ ನಾಳೆಗೆ ಮುಂದೂಡಿಕೆ

Srinivas Rao BV

ಬೆಂಗಳೂರು: ಹೆಸರಾಂತ ಚಿತ್ರ ನಟಿ ಜಯಂತಿ, ಮಂಡ್ಯ ಜಿಲ್ಲೆಯ ಎತ್ತರದ ರಾಜಕಾರಣಿ, ಅಗ್ರಗಣ್ಯ ರೈತಪರ ಹೋರಾಟಗಾರ, ಜಿ. ಮಾದೇಗೌಡ, ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ, ಹಾಲಿ ಶಾಸಕರಾಗಿದ್ದ ಸಿ.ಎಂ ಉದಾಸಿ, ದಲಿತ ಕವಿ ಸಿದ್ದಲಿಂಗಯ್ಯ ನಿಘಂಟು ತಜ್ಞ ಪ್ರೋ. ವೆಂಕಟ ಸುಬ್ಬಯ್ಯ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸೇರಿದಂತೆ ಇತ್ತೀಚಿಗೆ ಅಗಲಿದ ಗಣ್ಯರಿಗೆ ವಿಧಾನಸಭೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನಂತರ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ವಿಧಾನಸಭೆಯ ಕಾರ್ಯಕಲಾಪ ಆರಂಭವಾಗುತ್ತಿದ್ದಂತೆಯೇ ಒಂದೇ ಮಾತರಂ ಧ್ವನಿ ಸದನವನ್ನು ಆವರಿಸಿಕೊಂಡಿತು. ನಂತರ ಪ್ರದೇಶ ಸಭಾಧ್ಯಕ್ಷ ವಿಶ್ವೇಶ್ವರ ಹೆಗವೆ ಕಾಗೇರಿ ಇತ್ತಿಚೆಗೆ ಆಗಲಿದೆ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯ ಮಂಡಿಸಿದರು.

ನಂತರ ಸಂತಾಪ ನಿರ್ಣಯ ಬೆಂಬಲಿಸಿ ಮುಖ್ಯಮಂತ್ರಿ , ಸಭಾ ನಾಯಕ ಬಸವರಾಜ್ ಬೊಮ್ಮಾಯಿ ಮಾತನಾಡಿ ಮೃತರು ನಾಡು-ನುಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ವಿಧಾನಸಭೆಯ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ಮಂಡ್ಯ ಜಿಲ್ಲೆಯ ಹಿರಿಯ ನಾಯಕ, ಮಾಜಿ ಸಚಿವ ಜಿ .ಮಾದೇಗೌಡ ಕಾವೇರಿಯ ವರಪುತ್ರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಮಾದೇಗೌಡರು, ರೈತ ಹೋರಾಟದ ಮೂಲಕ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಮಂಡ್ಯ ಜಿಲ್ಲೆಯ ಜನಜನಿತ ನಾಯಕರಾಗಿದ್ದರು . ಆರೋಗ್ಯ ಮತ್ತು ಶಿಕ್ಷಣಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದರು ಎಂದು ಹೆಳಿದರು. ಬಳಿಕ ಸಂತಾಪ ನಿರ್ಣಯದ ಮೇಲೆ ಸಚಿವರಾದ ಜೆ. ಸಿ. ಮಾಧುಸ್ವಾಮಿ ನಾರಾಯಣಗೌಡ, ಬಿ. ಸಿ ಪಾಟೀಲ್, ಮತ್ತು ಶಾಸಕರಾದ ಶರತ್ ಬಚ್ಚೇಗೌಡ, ಹೆಚ್. ಕೆ . ಪಾಟೀಲ್, ಮೊದಲಾದವರು ಮಾತನಾಡಿ ಮೃತರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ನಂತರ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷಗಳ ಕಾಲ ಮೌನ ಆಚರಿಸಲಾಯಿತು ಬಳಿಕ ವಿಧಾನಸಭೆ ಕಲಾಪವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಾಳೆಗೆ ಮುಂದೂಡಿದರು.

SCROLL FOR NEXT