ಸಾಂದರ್ಭಿಕ ಚಿತ್ರ 
ರಾಜ್ಯ

ವಾರದೊಳಗೆ ಗುಂಡಿಮುಕ್ತ ರಸ್ತೆ: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬಿಬಿಎಂಪಿ ಭರವಸೆ

ಸೆಪ್ಟೆಂಬರ್ 20ರೊಳಗೆ ಬೆಂಗಳೂರು ನಗರ ಗುಂಡಿ ಮುಕ್ತ ರಸ್ತೆಯನ್ನು  ಹೊಂದಲಿದೆ ಎಂದು ಬಿಬಿಎಂಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಭರವಸೆ ನೀಡಿದೆ.

ಬೆಂಗಳೂರು: ಸೆಪ್ಟೆಂಬರ್ 20ರೊಳಗೆ ಬೆಂಗಳೂರು ನಗರ ಗುಂಡಿ ಮುಕ್ತ ರಸ್ತೆಯನ್ನು  ಹೊಂದಲಿದೆ ಎಂದು ಬಿಬಿಎಂಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಭರವಸೆ ನೀಡಿದೆ.

ವಿಕಾಸಸೌಧದಲ್ಲಿ ಬಿಬಿಎಂಪಿ, ಬಿಎಂಆರ್‌ಸಿಎಲ್, ಬಿಡಿಎ, ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಸಂಚಾರ ಪೊಲೀಸ್ ಪ್ರತಿನಿಧಿಗಳೊಂದಿಗೆ ನಡೆದ ಸಮನ್ವಯ ಸಮಿತಿಯ ಸಭೆಯಲ್ಲಿ, ಹಾನಿಗೊಳಗಾದ ನಗರದ ರಸ್ತೆಗಳನ್ನು ಒಂದು ವಾರದೊಳಗೆ ಸರಿಪಡಿಸಲಾಗುವುದು ಎಂದು ಬಿಬಿಎಂಪಿ ಎಲ್ಲರಿಗೂ ಭರವಸೆ ನೀಡಿದೆ.

ಆಯಾ ವಲಯ ಎಂಜಿನಿಯರ್‌ಗಳು ನಗರದ ಇತರ ರಸ್ತೆಗಳನ್ನು  ನೋಡಿಕೊಳ್ಳುತ್ತಾರೆ ಮತ್ತು ಅವುಗಳನ್ನು ಗುಂಡಿ-ಮುಕ್ತಗೊಳಿಸುತ್ತಾರೆ ಎಂದು ಸಭೆಯಲ್ಲಿ ಪಾಲ್ಗೊಂಡವರು ಹೇಳಿದರು. 

ಬೀದಿ ದೀಪಗಳ ವಿಷಯದಲ್ಲಿ ಸಂಚಾರ ವಿಭಾಗವು ನಗರದ ಕತ್ತಲೆ ಪ್ರದೇಶಗಳನ್ನು ಗುರುತಿಸುತ್ತದೆ ಮತ್ತು ಈ ವಿಚಾರದ ಬಗ್ಗೆ  ಎರಡು ವಾರಗಳ ನಂತರ ಮುಂದಿನ ಸಮನ್ವಯ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ  'ರಾಜ್ಯದ ಭವಿಷ್ಯದ ವಿಷನ್ 2020 ಗಾಗಿ ಪ್ರಸ್ತಾವಿತ ರಸ್ತೆ ನಕ್ಷೆ ಬಗ್ಗೆಯೂ ಚರ್ಚಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT