ರಾಜ್ಯ

ನೋಂದಣಿ ಮಾಡದ ಬೋರ್ ವೆಲ್ ಗಳಿಗೆ ಗಡುವು ನಿಗದಿ: ತಪ್ಪಿದರೆ 1 ಲಕ್ಷ ರೂ. ದಂಡ

Harshavardhan M

ಬೆಂಗಳೂರು: ವಸತಿ ಹಾಗೂ ವಾಣಿಜ್ಯ ಸಮುಚ್ಛಯಗಳು ಇನ್ನೂ ತಮ್ಮ ಬೋರ್ ವೆಲ್ ಗಳನ್ನು ನೋಂದಣಿ ಮಾಡಿಸಿಕೊಳ್ಳದೇ ಇದ್ದಲ್ಲಿ ಆದಷ್ಟು ಬೇಗನೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಅಂತರ್ಜಲ ಪ್ರಾಧಿಕಾರ ಎಚ್ಚರಿಸಿದೆ. 

ಅದಕ್ಕಾಗಿ ಮಾರ್ಚ್ 31, 2022ರ ತನಕ ಗಡುವು ನಿಗದಿ ಪಡಿಸಿದೆ. ಗಡುವು ಮೀರಿದಲ್ಲಿ 1 ಲಕ್ಷ ರೂ. ದಂಡ ಕಟ್ಟಬೇಕಾಗಿ ಬರುವುದು. ಅದರ ಜೊತೆಗೆ ಹೆಚ್ಚುವರಿ ಪರಿಸರ ಶುಲ್ಕವನ್ನೂ ಕಟ್ಟಿಸಿಕೊಳ್ಳಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ಅಪಾರ್ಟ್ ಮೆಂಟುಗಳು, ಹೌಸಿಂಗ್ ಸೊಸೈಟಿಗಳು, ಸರ್ಕಾರಿ ನೀರು ಪೂರೈಕೆ ಏಜೆನ್ಸಿಗಳು, ಗಣಿಗಾರಿಕಾ ಸಂಸ್ಥೆಗಳು, ಸ್ವಿಮ್ಮಿಂಗ್ ಪೂಲ್ ಗಳು ಎಲ್ಲವೂ ತಮ್ಮ ಹಳೆಯ ಹಾಗೂ ಹೊಸ ಬೋರ್ ವೆಲ್ ಸಂಪರ್ಕವನ್ನು ನೋಂದಣಿ ಮಾಡಿಸಿಕೊಳ್ಳತಕ್ಕದ್ದು. 

SCROLL FOR NEXT