ಹಾವೇರಿ ಜಿಲ್ಲೆ ಕರಡಗಿಯಲ್ಲಿನ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ಬಿದ್ದಿರುವ ಸ್ಮಾರಕ 
ರಾಜ್ಯ

ಹಾವೇರಿಯಲ್ಲಿ ಧೀರ್ಘಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಚಾಲುಕ್ಯ ಕಾಲದ ಸ್ಮಾರಕಗಳು; ನಿಧಿಗಾಗಿ ಶೋಧ!

ಹಾವೇರಿ ಜಿಲ್ಲೆಯಲ್ಲಿ ಐತಿಹಾಸಿಕ ಸ್ಮಾರಕಗಳು ಧೀರ್ಘ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ನಿಧಿಗಾಗಿ ಅವುಗಳನ್ನು ಹಾನಿ ಮಾಡುವ ಪ್ರಯತ್ನಗಳು ಹೆಚ್ಚಾಗುತ್ತಲೇ ಇವೆ. ಐದನೇ ಶತಮಾನದ ಚಾಲುಕ್ಯ ಕಾಲದ ಪುರಾತನ ಸ್ಮಾರಕ ಸವಣೂರು ಮತ್ತು ಹಾನಗಲ್ ತಾಲೂಕ್ ನಲ್ಲಿ ಬಯಲು ಪ್ರದೇಶದಲ್ಲಿ ಬಿದ್ದಿದೆ. 

ಹುಬ್ಬಳ್ಳಿ: ಹಾವೇರಿ ಜಿಲ್ಲೆಯಲ್ಲಿ ಐತಿಹಾಸಿಕ ಸ್ಮಾರಕಗಳು ಧೀರ್ಘ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ನಿಧಿಗಾಗಿ ಅವುಗಳನ್ನು ಹಾನಿ ಮಾಡುವ ಪ್ರಯತ್ನಗಳು ಹೆಚ್ಚಾಗುತ್ತಲೇ ಇವೆ. ಐದನೇ ಶತಮಾನದ ಚಾಲುಕ್ಯ ಕಾಲದ ಪುರಾತನ ಸ್ಮಾರಕ ಸವಣೂರು ಮತ್ತು ಹಾನಗಲ್ ತಾಲೂಕ್ ನಲ್ಲಿ ಬಯಲು ಪ್ರದೇಶದಲ್ಲಿ ಬಿದ್ದಿದೆ. ಈ ಸ್ಮಾರಕವನ್ನು ಸಂರಕ್ಷಿಸುವಂತೆ ಇತಿಹಾಸ ಪ್ರಿಯರ ಧೀರ್ಘ ಕಾಲದ ಬೇಡಿಕೆಯಾಗಿದೆ.

ಸ್ಥಳೀಯ ಆಡಳಿತ ದೇವಾಲಯ ರಕ್ಷಣೆ ಅಥವಾ ದುರಸ್ತಿಗೆ ಮುಂದಾಗದಿದ್ದರೂ ಸವಣೂರು ತಾಲೂಕಿನ ಕರಡಗಿಯ ಈಶ್ವರ ದೇವಾಲಯದ ಅಡಿಯಲ್ಲಿ ಅಪಾರ ಪ್ರಮಾಣದ ಚಿನ್ನದ ನಿಧಿಯಿರುವ ಬಗ್ಗೆ ವದಂತಿಗಳು ಹಬ್ಬಿವೆ. ಈ ದೇವಾಲಯ ಸಂಕೀರ್ಣದಲ್ಲಿರುವ ವೀರಭದ್ರೇಶ್ವರ ದೇವಾಲಯಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತಾಧಿಗಳು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.

ನಿಧಿ ಅಡಗಿರುವ ವದಂತಿಗಳಿಂದಾಗಿ ಇಲ್ಲಿನ ಸ್ಥಳೀಯರು ಸಾಮಾನ್ಯ ಪ್ರವಾಸಿಗರನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸುತ್ತಾರೆ. ಪುರಾತನ ಕಾಲದ ಸ್ಮಾರಕ ಕೃಷಿ ಭೂಮಿಯಲ್ಲಿ ಬಿದಿದ್ದು, ಅಲ್ಲಿಂದು ಯಾರೂ ಕೂಡಾ ಬೇರೆಡೆಗೆ ಸಾಗಿಸಿಲ್ಲ. ಈ ಸ್ಮಾರಕಗಳಿಗೆ ಕಾನೂನು ರೀತಿಯ ರಕ್ಷಣೆ ನೀಡಬೇಕೆಂದು ಇತಿಹಾಸ ಪ್ರಿಯರು ಹಲವು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ ಆದರೆ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ, ಸ್ಮಾರಕಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿಲ್ಲ.

ಈಶ್ವರ ದೇವಾಲಯದ ಅಡಿಯಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನವಿದೆ ಎಂಬ ವದಂತಿಗಳಿಂದಾಗಿ ಸ್ಥಳೀಯರು ಅಲ್ಲಿಗೆ ಜನರಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಈ ಪ್ರದೇಶಕ್ಕೆ ಪ್ರವಾಸಿಗರು ಬರುವುದನ್ನು ತಡೆಯುವ ನಿಟ್ಟಿನಲ್ಲಿ ದೇವಾಲಯ ಟ್ರಸ್ಟ್ ಈಶ್ವರಪ್ಪ ದೇವಾಲಯದ ಬಳಿಯಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿ ಹಾಗೂ ಶೌಚಾಲಯವನ್ನು ಕಟ್ಟಿದೆ. ದೇವಾಲಯದ ಸುತ್ತಮುತ್ತ ಸ್ನಾನ ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಎಲ್ಲವೂ ನಿಧಿಗಾಗಿ ಈ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಇದೆಲ್ಲ ವ್ಯರ್ಥ ಎಂದು ಕರಡಗಿಯ ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ.

ಈಶ್ವರ ದೇವಾಲಯದ ಅಡಿಯಲ್ಲಿ ಚಿನ್ನವಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಡಾಡುತ್ತಿರುವ ತಪ್ಪು ಮಾಹಿತಿಗೆ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಇತಿಹಾಸಜ್ಞರು ಹೇಳುತ್ತಾರೆ. ಇದು ಅನೇಕ ದೇವಾಲಯಗಳ ನಾಶಕ್ಕೆ ಕಾರಣವಾಗಿದೆ. ನಿರ್ಲಕ್ಷ್ಯಕ್ಕೆ ಒಳಗಾಗಿರುವ ದೇವಾಲಯಗಳ ಬಗ್ಗೆ ಸರ್ಕಾರ ದಾಖಲುಪಡಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ. 

ಹಾವೇರಿಯಂತೆಯೇ ದಾವಣಗೆರೆ, ಕೊಪ್ಪಳ, ಗದಗದಲ್ಲಿಯೂ ನಿಧಿ ಆಸೆಗಾಗಿ ಸ್ಮಾರಕಗಳಿಗೆ ಹಾನಿಯನ್ನುಂಟು ಮಾಡುವ ಪ್ರಕರಣಗಳು ಈ ಹಿಂದೆ ವರದಿಯಾಗಿತ್ತು. ಕಲ್ಕೇರಿಗೆ ಭೇಟಿ ನೀಡಿದ್ದರೆ, ಅನೇಕ ವರ್ಷಗಳಿಂದ ಭೂಮಿಯಲ್ಲಿ ಅರ್ಧಕ್ಕೆ ಊತ್ತಿರುವ ಅನೇಕ ಸ್ಮಾರಕಗಳನ್ನು ನೋಡಬಹುದಾಗಿದೆ. ಈಗಲೂ ಕೂಡಾ ಸರ್ಕಾರ ಈ ಪ್ರದೇಶಗಳಿಗೆ ನ್ಯಾಯ ಕಲ್ಪಿಸುವಲ್ಲಿ ವಿಫಲವಾಗಿದೆ. ಬದಲಿಗೆ ನಿಧಿಗಾಗಿ ಅಗೆಯುವ  ಪ್ರಯತ್ನ ಮುಂದುವರೆದಿದೆ ಎಂದು ಇತಿಹಾಸಜ್ಞರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT