ರಾಜ್ಯ

ಬೆಂಗಳೂರಿನಲ್ಲಿ ಉಳಿದಿರುವುದು ಕೇವಲ 198 ರಸ್ತೆ ಗುಂಡಿಯೇ?: ಬಿಬಿಎಂಪಿ ಘೋಷಣೆ!

Shilpa D

ಬೆಂಗಳೂರು: ಇಲ್ಲಿಯವರೆಗೆ ನಗರದಲ್ಲಿ 1,334 ಗುಂಡಿಗಳನ್ನು ಮುಚ್ಚಿದ್ದು, ಇನ್ನೂ ಕೇವಲ 198 ರಸ್ತೆ ಗುಂಡಿ ಮಾತ್ರ ಉಳಿದಿವೆ. ಅವುಗಳನ್ನು ಮುಂದಿನ ಮೂರು ದಿನಗಳಲ್ಲಿ ಸರಿ ಪಡಿಸಲಾಗುವುದು ಎಂದು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ ಗುಪ್ತಾ ಹೇಳಿದ್ದಾರೆ.

ಆದರೆ ಇದುವರೆಗೂ ಎಷ್ಟು ರಸ್ತೆಗುಂಡಿಗಳನ್ನು ಮುಚ್ಚಿದ್ದಾರೆ ಎಂಬ ಬಗ್ಗೆ ಆಯುಕ್ತರು ಮತ್ತು ಬಿಬಿಎಂಪಿ ಎಂಜಿನೀಯರ್ ಗಳು ಮಾಹಿತಿ ನೀಡಲಿಲ್ಲ, ಕೇವಲ ಇನ್ನೂ 198 ರಸ್ತೆಗುಂಡಿ ಮಾತ್ರ ಮುಚ್ಚಬೇಕು ಎಂದು ಹೇಳಿದ್ದಾರೆ, ಆದರೆ ಬೆಂಗಳೂರು ನಿವಾಸಿಗಳು ಬಿಬಿಎಂಪಿಯ ಈ ಅಂಕಿ ಅಂಶಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಸೆಪ್ಟಂಬರ್ 20 ರವೆರೆಗೆ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಸರ್ಕಾರ ಗಡುವು ನೀಡಿತ್ತು. ಬೆಂಗಳೂರು  ಸ್ಮಾರ್ಟ್ ಸಿಟಿ ಯೋಜನೆಯ 1,344 ಕಿಮೀ ವ್ಯಾಪ್ತಿಯಲ್ಲಿ ಟೆಂಡರ್ ಶ್ಯೂರ್ ಮತ್ತು ವೈಟ್ ಟಾಪಿಂಗ್ ಕೆಲಸಗಳು ನಡೆಯುತ್ತಿವೆ.  ಜಯಮಹಲ್, ಮರಿಗೌಡ, ರಿಚ್‌ಮಂಡ್, ಗೊರಗುಂಟೆಪಾಳ್ಯ, ರಾಜಕುಮಾರ ಸಮಾಧಿ ಎದುರಿನ ರಸ್ತೆ ಮತ್ತು ಯಶವಂತಪುರದಿಂದ ಗೊರಗುಂಟೆಪಾಳ್ಯದವರೆಗೆ ರಸ್ತೆಗಳು ಹಾಳಾಗಿವೆ ಎಂದು ಬಿಬಿಎಂಪಿ ಆಯುಕ್ತರು ಒಪ್ಪಿಕೊಂಡಿದ್ದಾರೆ, ಈ ರಸ್ತೆಗಳಲ್ಲಿ ಸದ್ಯ ಡಾಂಬರೀಕರಣ ನಡೆಯುತ್ತಿದೆ ಎಂದು ಹೇಳಿದ್ದಾರೆ.

SCROLL FOR NEXT