ರಾಜ್ಯ

ದೇವಾಲಯ ಪ್ರವೇಶಿಸಿದಕ್ಕೆ ದಲಿತನೋರ್ವನಿಗೆ 11 ಸಾವಿರ ರೂಪಾಯಿ ತೆರುವಂತೆ ಮಾಡಿದ ಗ್ರಾಮಸ್ಥರು

Srinivas Rao BV

ಕೊಪ್ಪಳ: ದೇವಸ್ಥಾನಕ್ಕೆ ಪ್ರವೇಶಿಸಿದ ಮಗುವೊಂದು ದಲಿತ ಸಮುದಾಯಕ್ಕೆ ಸೇರಿದ್ದು ಎಂಬ ಕಾರಣಕ್ಕೆ ಆ ಕುಟುಂಬದವರಿಗೆ 25,000 ದಂಡ ವಿಧಿಸಿದ ಘಟನೆ ಕುಷ್ಟಗಿಯಲ್ಲಿ ವರದಿಯಾದ ಬೆನ್ನಲ್ಲೇ ಇಂಥಹದ್ದೇ ಘಟನೆ ಕರಟಗಿಯಲ್ಲಿ ವರದಿಯಾಗಿದೆ. 

11 ದಿನಗಳ ಹಿಂದೆ ಈ ಘಟನೆ ನಡೆದಿದ್ದು ವ್ಯಕ್ತಿಯೋರ್ವ ಲಕ್ಷ್ಮಿ ದೇವಿ ದೇವಾಲಯಕ್ಕೆ ಪ್ರವೇಶಿಸಿದ್ದಕ್ಕೆ 11 ಸಾವಿರ ರೂಪಾಯಿಗಳನ್ನು ಆತನಿಂದ ಖರ್ಚು ಮಾಡಿಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗಿದೆ.

"ಹೌದು ದೇವಾಲಯ ಪ್ರವೇಶಿಸಿದ್ದ ಕಾರಣಕ್ಕಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವುದಕ್ಕೆ ಆತನಿಂದ 11,000 ರೂಪಾಯಿ ಖರ್ಚು ಮಾಡಿಸಲಾಗಿದೆ. ನಮ್ಮ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್ ಪಿ ಶ್ರೀಧರ ಟಿ ಹೇಳಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ ಶುಕ್ರವಾರದಂದು ಈ ಘಟನೆ ವರದಿಯಾಗಿದ್ದು, ಆಗಿನಿಂದಲೂ ಅರ್ಚಕರು ದಲಿತನಿಗೆ ಧಾರ್ಮಿಕ ಕಾರ್ಯಕ್ರಮ ನಡೆಸಲು ಆಗ್ರಹಿಸಿದ್ದರು.

ಕಳೆದ ಕೆಲವು ತಿಂಗಳ ಹಿಂದೆ ದೇವಾಲಯದಲ್ಲಿ ಕಳವು ಸಂಭವಿಸಿತ್ತು ಹಾಗೂ ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರೂ ದೇವಾಲಯಕ್ಕೆ ಹೋಗಕೂಡದೆಂಬ ನಿರ್ಧಾರ ಕೈಗೊಳ್ಳಲಾಗಿತ್ತು, ಆದರೆ  ದಲಿತ ವ್ಯಕ್ತಿಯೋರ್ವ ದೇವಾಲಯದ ಒಳಗೆ ಪ್ರವೇಶಿಸಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಗ್ರಾಮದ ಹಿರಿಯರು ಕೈಗೊಂಡಿದ್ದ ನಿರ್ಧಾರವನ್ನು ಉಲ್ಲಂಘನೆ ಮಾಡಿ ದಲಿತ ವ್ಯಕ್ತಿ ಸೆ.14 ರಂದು ದೇವಾಲಯ ಪ್ರವೇಶಿಸಿದ್ದ. ಈ ಘಟನೆಗೆ ಸಂಬಂಧ ಐವರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
 

SCROLL FOR NEXT