ಸಾಂದರ್ಭಿಕ ಚಿತ್ರ 
ರಾಜ್ಯ

ಚಿಕ್ಕಬಳ್ಳಾಪುರ: ತಪ್ಪಿಸಿಕೊಳ್ಳುವ ಭರದಲ್ಲಿ ಗ್ರಾಮಸ್ಥರ ಮೇಲೆ ಬೈಕ್ ಕಳ್ಳರಿಂದ ಗುಂಡಿನ ದಾಳಿ

ವಾಹನಗಳನ್ನು ಕದ್ದು ಪರಾರಿಯಾಗುವ ಭರದಲ್ಲಿ ಬೈಕ್ ಕಳ್ಳರಿಬ್ಬರು ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ವಾಹನಗಳನ್ನು ಕದ್ದು ಪರಾರಿಯಾಗುವ ಭರದಲ್ಲಿ ಬೈಕ್ ಕಳ್ಳರಿಬ್ಬರು ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದ ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಮರವೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಕಳ್ಳರು ಗ್ರಾಮದಲ್ಲಿ ಬೈಕ್ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಅವರನ್ನು ಹಿಡಿಯಲು ಗ್ರಾಮಸ್ಥರು ಮುಂದಾಗಿದ್ದು, ಆಗ ಕಳ್ಳರು ಗ್ರಾಮಸ್ಥರ ಮೇಲೆ ಗುಂಡು ಹಾರಿಸಿ ಪರಾರಿ ಆಗಿದ್ದಾರೆ. 

ಈ ಗುಂಡಿನ ದಾಳಿಯಲ್ಲಿ ಗ್ರಾಮಸ್ಥ ಗಂಗಾಧರ್ ಅವರ ಹೊಟ್ಟೆಗೆ ಗುಂಡು ತಗುಲಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್ ತಿಳಿಸಿದ್ದಾರೆ.

ಇಬ್ಬರು ಕಳ್ಳರು ಬೈಕ್ ಕದ್ದು ಪರಾರಿಯಾಗುವಾಗ ಬೈಕ್ ಮಾಲೀಕ ಅದನ್ನು ಗಮನಿಸಿ ಕೂಡಲೇ ಅವರನ್ನು ತಡೆಯಲು ಮುಂದಾಗಿದ್ದಾರೆ. ಅಲ್ಲದೆ ಸ್ಥಳೀಯರಿಗೆ ಮಾಹಿತಿ ನೀಡಿ ಎಲ್ಲರೂ ಅವರನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಸಿಕ್ಕಿ ಬೀಳುವ ಭಯದಲ್ಲಿ ಕಳ್ಳರು ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಬೈಕ್ ಕಳ್ಳರು ಪರಾರಿಯಾಗಿದ್ದಾರೆ. ಪ್ರಸ್ತುತ ಬೈಕ್ ಕಳ್ಳರ ಬಂಧನಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಇರುವ ಚೆಕ್ ಪೋಸ್ಟ್ ಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮ ಕಡೆಯಿಂದ ವೈಮಾನಿಕ ದಾಳಿ ಇರುವುದಿಲ್ಲ: 5 ವರ್ಷಗಳಲ್ಲಿ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪಿಸಿದ ಯುಕ್ರೇನ್ ಅಧ್ಯಕ್ಷ Zelensky

ಡ್ರಗ್ಸ್ ಸೇವನೆ ದೃಢ: ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ!

Video: 'ಪೊಲೀಸರು ಬುದ್ದಿ ಕಲಿಸಿದ್ದಾರೆ, ತಪ್ಪನ್ನ ಕ್ಷಮಿಸಲ್ಲ'; ಮಗ ಸಾಮ್ರಾಟ್‌ ಬಗ್ಗೆ ಕೊನೆಗೂ ಮೌನ ಮುರಿದ ನಟ Duniya Vijay

‘ಹೂತುಹಾಕಬೇಕು ಎನ್ನುವವರಲ್ಲ ನಾವು’.. ‘ಮಹಿಳೆಯರಿಗೆ ಶಿಕ್ಷಣ, ಅವಕಾಶ ನೀಡುತ್ತಿದ್ದೇವೆ’: ‘ಮನೆಯಲ್ಲೇ ಇರಬೇಕು’ ಹೇಳಿಕೆಗೆ ಮುಸ್ಲಿಂ ಧರ್ಮಗುರು ಸ್ಪಷ್ಟನೆ, Video

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!