ರಾಜ್ಯ

ಲಕ್ಕಸಂದ್ರ ಕಟ್ಟಡ ಕುಸಿತ ಪ್ರಕರಣ: ಮನೆ ಮಾಲೀಕನ ಬಂಧನ

Manjula VN

ಬೆಂಗಳೂರು: 3 ಅಂತಸ್ತಿನ 60 ವರ್ಷಕ್ಕೂ ಹಳೆಯದಾದ ಶಿಥಿಲವಾಗಿದ್ದ ಕಟ್ಟಡ ಸೋಮವಾರ ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡುಗೋಡಿ ಪೊಲೀಸರು ಬುಧವಾರ ಮನೆ ಮಾಲೀಕನನ್ನು ಬಂಧನಕ್ಕೊಳಪಡಿಸಿದ್ದಾರೆ. 

ಘಟನೆ ಸಂಭವಿಸುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಕಟ್ಟಡದ ಮಾಲೀಕ ಸುರೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ಕಟ್ಟಡ ಬೀಳುವ ಹಂತಕ್ಕೆ ಬಂದಿದ್ದರೂ ನಿರ್ಲಕ್ಷ್ಯ ತೋರಿ ಕಾರ್ಮಿಕರಿಗೆ ಮನೆ ಬಾಡಿಗೆ ನೀಡಿದ್ದ ಹಿನ್ನೆಲೆಯಲ್ಲಿ ಸುರೇಶ್ ನನ್ನು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಆತನತ ವಿರುದ್ಧ ಈಗಾಗಲೇ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇನ್ನು ಕಟ್ಟಡ ಕುಸಿದು ಬಿದ್ದ ಒಂದೇ ದಿನಕ್ಕೆ ಅವಶೇಷಗಳನ್ನು ತೆರವು ಮಾಡಲಾಗಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮಂಗಳವಾರವೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಲಕ್ಕಸಂದ್ರದಲ್ಲಿ ಸುರೇಶ್'ಗೆ ಸೇರಿದ ಮೂರು ಅಂತಸ್ತಿನ ಕಟ್ಟಡದಲ್ಲಿ ಕಳೆದರಡು ವರ್ಷಗಳಿಂದ ಯಾರೂ ವಾಸವಾಗಿರಲಿಲ್ಲ. ಇಥ್ತೀಚೆಗೆ ಖಾಲಿ ಇದ್ದ ಕಟ್ಟಡದಲ್ಲಿ ಮೆಟ್ರೋ ಮಾರ್ಗದ ಕಾಮಗಾರಿಗಾಗಿ ಬಂದಿದ್ದ 40 ಮಂದಿ ಕಾರ್ಮಿಕರು ವಾಸವಿದ್ದರು. ಕಟ್ಟಡ ಕುಸಿಯುವ ಮುನ್ಸೂಚನೆ ಸಿಕ್ಕಿದ ಕೂಡಲೇ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಮನೆಯಿಂದ ಹೊರಗೆ ಕಳುಹಿಸಿದ್ದರು. ಪರಿಣಾಮ ಭಾರೀ ಅನಾಹುತವೊಂದು ತಪ್ಪಿತಂದಾಗಿತ್ತು.

SCROLL FOR NEXT